ಎಂ. ಉಷಾ, ರಚಿಸಿರುವ 'ಭಾಷಾಂತರ ಮತ್ತು ಲಿಂಗರಾಜಕಾರಣ' ಕೃತಿಯು ಲಿಂಗತ್ವವನ್ನು ಬಳಸಿಕೊಂಡು ಕನ್ನಡದ ಭಾಷಾಂತರ ಪಠ್ಯಗಳ ಲಿಂಗ ರಾಜಕಾರಣವನ್ನು ವಿಶ್ಲೇಷಿಸುವ ಪ್ರಯತ್ನವಾಗಿದೆ.
ವೈಚಾರಿಕ ವ್ಯವಸ್ಥೆಯೊಂದರಲ್ಲಿ ಭಾಷಾಂತರಗಳೂ 'ಸ್ವತಂತ್ರ' ರಚನೆಗಳಷ್ಟೇ ರಾಜಕೀಯ ಆಸಕ್ತಿ ಹೊಂದಿರುತ್ತವೆ ಎನ್ನುವ ಆಧುನಿಕೋತ್ತರ ಚಿಂತನೆಯ ಪ್ರಮೇಯವನ್ನು ಆಧರಿಸಿ, ಮಹಿಳಾ ಪ್ರಶ್ನೆಗಳು ಮುಂಚೂಣಿಯಲ್ಲಿದ್ದ ವಸಾಹತು ಕಾಲಘಟ್ಟದಲ್ಲಿ ಕನ್ನಡದ ರೂಪಾಂತರ(ನಾಟಕ)ಗಳು ಈ ಪ್ರಶ್ನೆಯನ್ನು ನಿರ್ವಹಿಸಿದ ಕ್ರಮ ಯಾವುದು ಎಂಬುದನ್ನು ಆಯ್ದ ಕೆಲವು ಪಠ್ಯಗಳ ಮುಖಾಂತರ ತೋರಿಸಿದ್ದಾರೆ.
ಕೃತಿಯ ಆಯ್ಕೆಯಿಂದ ಹಿಡಿದು ಭಾಷಾಂತರದ ಉದ್ದೇಶ, ಆಶಯ ಹಾಗೂ ಸ್ವರೂಪದವರೆಗೆ ಎಲ್ಲ ಹಂತಗಳಲ್ಲಿಯೂ ಲಿಂಗತ್ವವು ಭಾಷಾಂತರವನ್ನು ಪ್ರಭಾವಿಸಬಲ್ಲದು ಎಂಬುದನ್ನು ಪ್ರಸ್ತುತ ಕೃತಿಯು ತೋರಿಸಿಕೊಡುತ್ತದೆ.
©2024 Book Brahma Private Limited.