ಚೀನಾ ಮತ್ತು ರಷ್ಯಾ ದೇಶಗಳಲ್ಲಿ ಭಾರತದ ರಾಯಭಾರಿಯಾಗಿದ್ದ ಶ್ರೀ ಕೆ.ಪಿ.ಎಸ್. ಮೆನನ್ ಅವರು ಭಾರತೀಯ ವಿದ್ಯಾಭವನದಲ್ಲಿ ನೀಡಿದ್ದ ಮೂರು ಉಪನ್ಯಾಸಗಳನ್ನು ಈ ಪುಸ್ತಕವು ಒಳಗೊಂಡಿದೆ. ಮೊದಲನೆಯ ಉಪನ್ಯಾಸದಲ್ಲಿ ಅವರು ಶೀತಲ ಸಮರದ ಹಿನ್ನೆಲೆ ಮತ್ತು ಅದರ ಆರಂಭವನ್ನೂ, ಎರಡನೆಯದರಲ್ಲಿ ಅದರ ಬೆಳವಣಿಗೆ ಮತ್ತು ಯೂರೋಪ್ ಮತ್ತು ಏಷ್ಯಾದಲ್ಲಿ ಹೇಗೆ ಹರಡಿತು ಎಂಬುದರ ಕುರಿತು ವಿವರಿಸಿದರೆ, ಮೂರನೆಯದರಲ್ಲಿ ಶೀತಲ ಸಮರದ ಅವನತಿಯನ್ನೂ ಕುರಿತು ವಿವರಿಸಿದ್ದಾರೆ. ಸಂದರ್ಭಕ್ಕೆ ಪೂರಕವಾಗಿ, ಭಾರತದ ತಟಸ್ಥ ನೀತಿಯನ್ನೂ, ಹಿಂಸೆಯ ನಿರಾಕರಣೆಯನ್ನೂ ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.