ಬೆಳ್ಳಿಅಂಕ

Author : ಬಿ. ಸುರೇಶ

Pages 198

₹ 125.00




Year of Publication: 2004
Published by: ಇಳ ಪ್ರಕಾಶನ
Address: # 36,49 ನ್ಯೂ ಟಿಂಬರ್ಯಾರ್ಡ್ ಲೇಔಟ್, ಬೆಂಗಳೂರು 500 026

Synopsys

’ಬೆಳ್ಳಿಅಂಕ’ ಸಿನಿಮಾಕ್ಕೆ ಇರುವ ಸಾಮಾಜಿಕ-ಸಾಂಸ್ಕೃತಿಕ ಜವಾಬ್ದಾರಿಯನ್ನು ತಿಳಿಸುವ ಸಿನಿಮಾ ನಿರ್ದೇಶಕ ಬಿ.ಸುರೇಶ್ ಬರೆದ ಕೃತಿ. ಸಿನಿಮಾದ ವಸ್ತು ಮತ್ತು ತಂತ್ರ ಯಾವ ಹದದಲ್ಲಿ ಸೇರಿ ಬಿಂಬವನ್ನು ಸೃಷ್ಟಿ ಮಾಡಿದೆ-ಮಾಡುತ್ತಿದೆ ಎಂದು ತಿಳಿಯುವ ಪ್ರಯತ್ನವನ್ನು ಈ ಕೃತಿ ಮಾಡುತ್ತದೆ. ಹೀಗೆ ದೃಶ್ಯ, ಶಬ್ದ ಸಂಕಲನ, ಕಥನದಲ್ಲಿ ಬರುವ ಬಿಂಬಗಳಲ್ಲಿ (Images) ಅರ್ಥ ಮತ್ತು ಅನುಭವ ಎಲ್ಲಿ ಮತ್ತು ಹೇಗೆ ಹುಟ್ಟುತ್ತವೆ ಎಂದು ಗುರುತಿಸುವ ಪ್ರಯತ್ನವು ಪುಸ್ತಕದಲ್ಲಿದೆ. ನಿಮ್ ವೆಂಡರ್, ಅಕಿರಾ ಕುರೋಸಾವಾ, ಇಂಗ್‌ಮ‌ರ್‌ ಬರ್ಗ್‌ಮನ್, ನೆಸ್ಟರ್ ಅಲ್‌ಮೆಂಡ್ರೋಸ್ ಮುಂತಾದವರು ಬರೆದ ಲೇಖನಗಳ ಕನ್ನಡ ಅನುವಾದವನ್ನೂ ಸೇರಿಸಿರುವುದರಿಂದ, ವಿಶ್ವವಿಖ್ಯಾತ ನಿರ್ದೇಶಕ, ತಂತ್ರಜ್ಞರು, ಮಾಧ್ಯಮವನ್ನು ಹೇಗೆ ಗ್ರಹಿಸಿದ್ದಾರೆ ಮತ್ತು ದುಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಯಲು ಅನುಕೂಲವಾಗುತ್ತದೆ.

About the Author

ಬಿ. ಸುರೇಶ

ರಂಗಭೂಮಿ ಕಲಾವಿದ, ನಾಟಕಕಾರ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಬಿ. ಸುರೇಶ, 1962ರಲ್ಲಿ ದಾವಣಗೆರೆಯಲ್ಲಿ ಜನಿಸಿದರು. ಹಿರಿಯ ಪತ್ರಕರ್ತೆ ಹಾಗೂ ಲೇಖಕಿ ವಿಜಯಾ ಅವರ ಪುತ್ರ. ಬಿ.ಸುರೇಶ ಅವರು 1973ರಿಂದಲೇ ಬಾಲನಟರಾಗಿ ಹವ್ಯಾಸಿ ರಂಗಭೂಮಿಯಲ್ಲಿ ಕಾಣಿಸಿಕೊಂಡು ಈವರೆಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಅಲ್ಲದೇ, 1976 ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಘಟಶ್ರಾದ್ದ ಚಿತ್ರದಲ್ಲಿ ಬಾಲನಟರಾಗಿ ಕಾಣಿಸಿಕೊಳ್ಳುವ ಮೂಲಕ ಇವರ ಚಿತ್ರರಂಗದ ಬದುಕು ಪ್ರಾರಂಭವಾಯಿತು. 1988 ರಲ್ಲಿ ಮಿಥಿಲೆಯ ಸೀತೆಯರು ನಿರ್ದೇಶನ ಮಾಡಿದ ಅವರು ಚಿತ್ರಕಥೆ, ಸಂಭಾಷಣೆ ಬರೆಯುತ್ತಾ 15 ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದಾರೆ.  ’ಅರ್ಥ’ ಚಿತ್ರಕ್ಕಾಗಿ ಬಿ.ಸುರೇಶ ಅವರಿಗೆ 2002-2003 ...

READ MORE

Related Books