ಚಿತ್ರ ಕಲಾವಿದ ಪಾಲ್ ಕ್ಲೇ ಅವರ ಕೃತಿಯನ್ನು ಕೆ.ಎಸ್. ಶ್ರೀನಿವಾಸ ಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಲಾವಿದನೊಬ್ಬ ತನ್ನ ಕಲಾಕೃತಿಗೆ ತನ್ನೊಳಗಿನಿಂದ ರೂಪ ನೀಡುತ್ತಾನೆ. ನೋಡುಗರ ಕಣ್ಣಲ್ಲಿ ಆ ಕಲಾಕೃತಿಗೆ ಸಾವಿರಾರು ರೂಪಗಳು ಮೂಡತೊಡಗುತ್ತವೆ. ಬರೆದ ನಂತರ ಕಲಾಕೃತಿ ವಿಶ್ಲೇಷಣೆ ಕಲಾಸಕ್ತರಿಗೆ ಬಿಟ್ಟಿದ್ದೆನಿಸಬಹುದು ಆದರೆ ಆ ಕೃತಿಯ ಮೂಲ ಕಲಾವಿದನ ಎದೆಯೊಳಗೆ ರೂಪುಪಡೆದ ಬಗೆ ಅರಿಯುವುದು ಅತೀ ಮುಖ್ಯವಾಗುತ್ತದೆ. ಅಂಥದ್ದೊಂದು ಪ್ರಯತ್ನವನ್ನ ಕಲಾವಿದ ಪಾಲ್ ಕ್ಲೇ ಮಾಡಿದ್ದಾನೆ. ಅದನ್ನು ಸೂಕ್ಷ್ಮವಾಗಿ ಶ್ರೀನಿವಾಸ ಮೂರ್ತಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕದಲ್ಲಿ ಮೂಲ ಕಲಾಕೃತಿಗಳ ಕುರಿತಾಗಿ ಕಲಾವಿದನ ಅನುಭವ ಮತ್ತು ವಿಶ್ಲೇಷಣೆಗಳಿವೆ
©2024 Book Brahma Private Limited.