1232 ಕಿ. ಮೀ ಮನೆ ಸೇರಲು ಸಾಗಿದ ದೂರ

Author : ಸತೀಶ್ ಜಿ. ಟಿ.

Pages 180

₹ 200.00




Year of Publication: 2021
Published by: ಪ್ರಜೋದಯ ಪ್ರಕಾಶನ
Address: #7, ಪವನ್ಸ್ ಅವೆನ್ಯೂ, ಮೊದಲನೇ ಮಹಡಿ, ರೇಣುಕಾದೇವಿ ಟ್ರಾನ್ಸ್ ಪೋರ್ಟ್ ಎದುರು, ವಿಶ್ವೇಶ್ವರಯ್ಯ ಬಡಾವಣೆ, ಹಾಸನ-57320
Phone: 8792276742

Synopsys

ಲೇಖಕ ಸತೀಶ್ ಜಿ.ಟಿ ಅವರು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿತ ಕೃತಿ-‘1232 ಕಿ.ಮೀ ಮನೆ ಸೇರಲು ಸಾಗಿದ ದೂರ’. ಏಳು ಮಂದಿ ವಲಸೆ ಕಾರ್ಮಿಕರು, ಏಳು ದಿನಗಳು, ಏಳು ರಾತ್ರಿಗಳ ಪ್ರಯಾಣದ ವಿಚಾರಗಳನ್ನು ಒಳಗೊಂಡಿದೆ. ಕೊರೊನಾ ಹರಡದಂತೆ 2020ರಲ್ಲಿ ಹೇರಲಾದ ದೇಶವ್ಯಾಪಿ ಲಾಕ್‌ಡೌನ್, ಲಕ್ಷಾಂತರ ವಲಸೆ ಕಾರ್ಮಿಕರು ಕೆಲಸ, ಆಹಾರ ಮತ್ತು ಆಶ್ರಯವಿಲ್ಲದೆ ಅತಂತ್ರರಾಗುವ ಸನ್ನಿವೇಶ ನಿರ್ಮಾಣವಾಗಲು ಕಾರಣವಾಯಿತು. ಅಸಹಾಯಕರಾದ ಕಾರ್ಮಿಕರು ಹೇಗಾದರೂ ಸರಿ ಮನೆ ತಲುಪಬೇಕೆಂದು ನಡೆದುಕೊಂಡು, ಸೈಕಲ್ ತುಳಿಯುತ್ತ ಊರುಗಳ ಹಾದಿ ಹಿಡಿದರು. ರಿತೇಶ್, ಆಶಿಶ್, ರಾಮ್‌ಬಾಬು, ಸೋನು, ಕೃಷ್ಣ, ಸಂದೀಪ್ ಮತ್ತು ಮುಕೇಶ್ ಬಿಹಾರ ಮೂಲದ ವಲಸೆ ಕಾರ್ಮಿಕರು. ಇತರರ ಹಾಗೆ ಇವರೂ ಕೂಡ ತಮ್ಮ ಬೈಸಿಕಲ್‌ಗಳಲ್ಲಿ ಊರು ತಲುಪಲು ಹೋದರು. ಏಳು ದಿನಗಳ ಕಾಲ ಪೊಲೀಸರು ಹಾಗೂ ಆಡಳಿತ ವ್ಯವಸ್ಥೆಯ ಕೌರ್ಯ, ಹಸಿವು, ಅವಮಾನ, ಹತಾಶೆ ಎಲ್ಲವನ್ನೂ ಎದುರಿಸಿಯೂ ತಮ್ಮ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು. ದೆಹಲಿ ಸಮೀಪದ ಗಾಜಿಯಾಬಾದ್‌ನಿಂದ ಶುರುವಾದ ಈ ಪ್ರಯಾಣ ಕೊನೆಗೊಳ್ಳುವುದು ಬಿಹಾರದ ಸಹರ್ಸಾದಲ್ಲಿ. ಈ ಏಳು ಮಂದಿ ತಮ್ಮ ಪ್ರಯಾಣದ ವೇಳೆ ಅನುಭವಿಸಿದ ಸವಾಲುಗಳನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ವಿನೋದ್ ಕಾಪ್ರಿ ತಮ್ಮ '1232 km: The Long Journey Home' ಕೃತಿಯಲ್ಲಿ ಕಟ್ಟಿಕೊಟ್ಟಿದ್ದರು. ಈ ಪುಸ್ತಕವನ್ನು ಪತ್ರಕರ್ತ ಸತೀಶ್ ಜಿ. ಟಿ. ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನಮ್ಮೊಡನೆ ಇದ್ದರೂ ನಾವೆಂದೂ ಅರಿಯಲು ಬಯಸದ ವಲಸೆ ಕಾರ್ಮಿಕರೆಂಬ ಮನುಷ್ಯ ಜೀವಿಗಳ ಬದುಕನ್ನು, ನಮ್ಮ ಹೊಣೆಗೇಡಿತನವನ್ನು ನಮಗೆ ಪರಿಚಯಿಸುವ ಕೃತಿ ಇದು. 

 

About the Author

ಸತೀಶ್ ಜಿ. ಟಿ.

ಸತೀಶ್ ಜಿ.ಟಿ ಅವರು ಮೂಲತಃ ಚಿತ್ರದುರ್ಗದವರು. ಮೈಸೂರು ಮಾನಸಗಂಗೋತ್ರಿಯಿಂದ ಆಂಗ್ಲ ಸಾಹಿತ್ಯದಲ್ಲಿ ಎಂಎ ಪದವೀಧರರು. ವೃತ್ತಿಯಿಂದ ಪತ್ರಕರ್ತರು. ವಿಜಯ ಟೈಮ್ಸ್, ಡೆಕ್ಕನ್ ಹೆರಾಲ್ಡ್, ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿ ಪ್ರಸ್ತುತ ಹಾಸನದಲ್ಲಿ ದಿ ಹಿಂದೂ ಪತ್ರಿಕೆಯ ವರದಿಗಾರರಾಗಿದ್ದಾರೆ. ಕೃತಿಗಳು: ಪತ್ರಕರ್ತ ಬಿ.ವಿ. ವೈಕುಂಠರಾಜು ಅವರ ಬದುಕು-ಬರಹ, 1232 ಕಿ.ಮೀ.’ (ಅನುವಾದಿತ ಕೃತಿ), ಇದು ಯಾವ ಸೀಮೆಯ ಚರಿತ್ರೆ (ಅನುವಾದಿತ ಕೃತಿ), ಲಖನೌ ಹುಡುಗ (ಶಶಿ ಸಂಪಳ್ಳಿಯವರೊಡನೆ ಅನುವಾದ),  ...

READ MORE

Reviews

‘1232 ಕಿ.ಮಿ’ ಕೃತಿಯ ವಿಮರ್ಶೆ

ಕೊರೋನಾ ನಿಯಂತ್ರಣಕ್ಕಾಗಿ ಒಕ್ಕೂಟ ಸರ್ಕಾರ ರಾತ್ರೋ ರಾತ್ರಿ ಹೇರಿದ 'ಲಾಕೌನ್' ಜೀವ ಕಾರ್ಮಿಕರ ಅದರಲ್ಲೂ ವಲಸೆ ಕಾರ್ಮಿಕರ ಜೀವ-ಜೀವನದ ಮೇಲೆ ಮಾಡಿದ ದೊಡ್ಡ ಪರಿಣಾಮದ ಕುರಿತು ಈ ಪುಸ್ತಕ ಮಾತನಾಡುತ್ತಾ ಹೋಗುತ್ತದೆ. 'ಲಾಕ್ಡೌನ್' ಪರಿಣಾಮವನ್ನು ಲಕ್ಷಾಂತರ ಮಂದಿ ರೈತ ಅನುಭವಿಸಿದ್ದಾರೆ, ಇದರಲ್ಲಿ ಏಳು ಮಂದಿಯ ಕಥಾನಕ ಇಲ್ಲಿದೆ. ಡಾಕ್ಯುಮೆಂಟರಿ ನಿರ್ಮಾಪಕ ವಿನೋದ್ ಕಾಪ್ರಿಬಿಹಾರದ ಏಳು ಕಾರ್ಮಿಕರನ್ನು ಸಹ ಏಳು ದಿನಗಳ ಕಾಲ ಹಿಂಬಾಲಿಸಿದರು. ಇದನ್ನೇ ರೂಪದಲ್ಲಿ ಮೊದಲು ಡಾಕ್ಯುಮೆಂಟರಿ ಬಿಡುಗಡೆ ಮಾಡಿದರು. ನಂತರ ಅಕ್ಷರ ರೂಪದಲ್ಲಿ ಕೃತಿಯಾಗಿಸಿದರು. ಈ ಪುಸ್ತಕ ಮೂಲಕ ಮತ್ತು ಡಾಕ್ಯುಮೆಂಟರಿ ಮೂಲಕ ಬರುವ ಸಂಭಾವನೆಯನ್ನು ಆ ಏಳು ಜನ ಕಾರ್ಮಿಕರಿಗೆ ವಿನೋದ್ ಕಾಪ್ರಿ ಹಂಚುತ್ತಿದ್ದಾರೆ.

(ಕೃಪೆ ; ಹೊಸಪುಸ್ತಕ, (ಸಮಾಜಮುಖಿ)

Related Books