ಲಲಿತಾ ಶಾಸ್ತ್ರಿ ಅವರು ಇಂಟರ್ ಮೀಡಿಯಟ್ ಶಿಕ್ಷಣ ಪಡೆದಿದ್ದರು 05-03-1941 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಾಯಣಶಾಸ್ತಿ, ತಾಯಿ ನರಸಮ್ಮ.
ಕೃತಿಗಳು : ಪ್ರಶ್ನೆಗೊಂದು ಉತ್ತರ, ಡಾಕ್ಟರ್, ಪ್ರೇಮಬಂಧನ, ಭಿಕ್ಷುಕಿಯ ಮಗಳು (ಕಾದಂಬರಿ), ವಿವೇಕಾನಂದ (ಜೀವನಚರಿತ್ರೆ), ಉತ್ತರ ಅಮೆರಿಕಾದಲ್ಲಿ ಚಾತುರ್ಮಾಸ, ಶ್ರೀ ಲಲಿತ ಸಹಸ್ರನಾಮ ಸ್ತೋತ್ರಸಾರ ಸರ್ವಸ್ವ, ಕಠೋಪನಿಷತ್ (ಆಧ್ಯಾತ್ಮಿಕ) ‘ಸಂಕ್ಷಿಪ್ತ, ಲೇಡಿ ಜರ್ನಲಿಸ್ಟ್, ಭ್ರಮನಿರಸನ, ಚೀನಾ ದೇಶದ ಮಂತ್ರಿ ಮತ್ತು ಇತರ ಕಥೆಗಳು’ (ಶಿಶುಸಾಹಿತ್ಯ).
ಅವರು ರಚಿಸಿದ ಭಿಕ್ಷುಕಿಯ ಮಗಳು ಸಣ್ಣಕಥೆ ಕಿರುಚಿತ್ರವಾಗಿ ವಾರ್ಷಿಕ ಚಲನಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಹಾಗೂ ಕೆನಡಾದ ಸ್ಟಾರ್ ಪ್ರಶಸ್ತಿ ಪಡೆದಿದೆ. ‘ಉತ್ತರ ಅಮೆರಿಕಾದಲ್ಲಿ ಚಾತುರ್ಮಾಸ ಕೃತಿಗೆ’ ಗೊರೂರು ಪ್ರತಿಷ್ಠಾನದ ಪ್ರಶಸ್ತಿ, ಲಿಪಿಪ್ರಾಜ್ಞೆ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿಗಳು ಲಭಿಸಿವೆ.