ಶ್ರೀಲತಾ ಎ., ಎಂ.ಎ.(ಅರ್ಥಶಾಸ್ತ್ರ) ಎಂ.ಎ.(ಆಡಳಿತ), ಬಿ.ಇಡಿ ಪದವಿ ಪಡೆದು ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಂದೆ ಪದ್ಮನಾಭ ಆಚಾರ್ಯ, ತಾಯಿ ಇಂದಿರಾ. ರಕ್ತತರ್ಪಣ (2007), ಸಂವಹನ (2010)ಲಿ ಕವನ ಸಂಕಲನ ಪ್ರಕಟಿಸಿದ್ದಾರೆ. ಮರುಕಳಿಕೆ(2010) ಪಠ್ಯಪುಸ್ತಕ : Economic Development of India, ಭಾಷಾಂತರ : Peace on the Earth John pope xiii (ಕನ್ನಡಕ್ಕೆ) ಕೃತಿಗಳನ್ನು ರಚಿಸಿದ್ದಾರೆ.
ಇಂಗ್ಲಿಷ್, ಕನ್ನಡ, ತುಳು ಭಾಷೆಗಳಲ್ಲಿ ಸಾಹಿತ್ಯ ರಚನೆ, ಹಿಂದೂಸ್ತಾನಿ ಸಂಗೀತದಲ್ಲಿ ವಿಶಾರದ ಪದವಿ, ಭಾರತ ಸೇವಾದಳದ ತರಬೇತಿ, ಸಿವಿಲಿಯನ್ ರೈಫಲ್ ಟ್ರೇನಿಂಗ್ ಕೋರ್ಸ್ (ಸಿ.ಆರ್.ಟಿ.ಸಿ.) ಕೊಳಚೆ ಪ್ರದೇಶದ ಅಧ್ಯಯನ ಮಾಡಿದ್ದಾರೆ. ಇವರಿಗೆ ಸಹ-ಕಾರ್ಯದರ್ಶಿ-ಕವಿಗಳ ಅಂತರಾಷ್ಟ್ರೀಯ ಸಂಘ, ಅಧ್ಯಕ್ಷೆ-ತಪೋವನ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯಲ್ಲಿ ಸೇವೆ ಸಲ್ಲಿಸಿದ್ಧಾರೆ.