ಮಹಾಭಾರತದ ಅಧ್ಯಯನ ಮಾಡಿದ ಖ್ಯಾತ ಸಮಾಜ ವಿಜ್ಞಾನಿ ಇರಾವತಿ ಕರ್ವೆಯವರು ಅದರ ವೀರಪುರುಷರ, ಪ್ರಸಿದ್ಧ ಸ್ಥಳಗಳ ಬಗೆಗೆ ಬರೆದ ಲೇಖನಗಳ ಸಂಗ್ರಹ ಈ ಕೃತಿ.
ಭೀಷ್ಮನು ಸೇನಾಪತಿಯಾಗಿದ್ದರೂ, ಯುದ್ಧವನ್ನು ತಡೆಯಲು ಮಾಡಿದ ಪ್ರಯತ್ನ, ಗಾಂಧಾರಿಯ ಮಾನಸಿಕ ಭಾವನೆಗಳು, ಕುಂತಿಯ ಪಾತ್ರ, ಅವಳ ನ್ಯಾಯಬುದ್ಧಿ, ವಾಸ್ತವಿಕ ಪ್ರಜ್ಞೆ, ಕಷ್ಟಸಹಿಷ್ಣುತೆ ಇವು, ದ್ರೌಪದಿಯ ಮತ್ತು ಕರ್ಣನ ವ್ಯಕ್ತಿತ್ವಗಳು, ದ್ರೌಪದಿಯ ಮತ್ತು ಕರ್ಣನ ವ್ಯಕ್ತಿತ್ವಗಳು, ಧರ್ಮರಾಯ ವಿದುರರ ಸಂಬಂಧ, ಇವೆಲ್ಲಕ್ಕೂ ಮಿುಗಿಲಾಗಿ ಕೃಷ್ಣನ ಪಾತ್ರ ಮತ್ತು ಅವನು ವಾಸುದೇವನಾಗುವುದು ಈ ಎಲ್ಲಾ ಸಂಗತಿಗಳ ಕುರಿತ ವಿವರಗಳನ್ನು ಲೇಖಕರು ಕೃತಿಯಲ್ಲಿ ಒದಗಿಸಿದ್ದಾರೆ.
ಸರಸ್ವತಿ ಗಜಾನನ ರಿಸಬೂಡ ಅವರು ಇದನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಒಬ್ಬ ಮಾನವ ಶಾಸ್ತ್ರಜ್ಞೆ ಹಾಗೂ ಸಮಾಜಶಾಸ್ತ್ರಜ್ಞೆ ದೇಶದ ಮಹಾಕಾವ್ಯವನ್ನು ಹೇಗೆ ವಿಶ್ಲೇಷಿಸಿದ್ದಾರೆ ಎಂಬ ಕುತೂಹಲ ತಣಿಸುತ್ತದೆ ’ಯುಗಾಂತ’.
©2024 Book Brahma Private Limited.