ಕುಮಾರವ್ಯಾಸನ ಕರ್ಣಾಟ ಭಾರತಿ ಕಥಾಮಂಜರಿ ಕೃತಿಯಲ್ಲಿ ಪಸ್ತಾಪಿಸಲಾದ ವಿದುರ ನೀತಿಯ ಭಾಗವನ್ನು ಲೇಖಕ ಎನ್. ರಂಗನಾಥ ಶರ್ಮ ಅವರು ದಾಖಲಿಸಿದ್ದೇ ಈ ಕೃತಿ. ಶತಮಾನೋತ್ಸವ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಈ ಕೃತಿಯನ್ನು ಪ್ರಕಟಿಸಿದೆ.
ಮಹಾಭಾರತದಲ್ಲಿ ಕೌರವರೂ ತನ್ನನ್ನು ಮೆಚ್ಚಿಕೊಳ್ಳದಿದ್ದರೂ ತಾನು ನಂಬಿದ ನೀತಿಯನ್ನು ಸಲಹೆ ರೂಪದಲ್ಲಿ ನೀಡುತ್ತಾ ಹೋಗುವ ವಿದುರನ ಪಾತ್ರದ ವಿಶೇಷತೆಯನ್ನು ಕುಮಾರವ್ಯಾಸನು ಗಮನಿಸಿದ್ದು, ಆ ವ್ಯಕ್ತಿತ್ವವನ್ನು ಸಾಹಿತ್ಯಕವಾಗಿ ರೂಪಿಸಿದ ಕೀರ್ತಿ ಆತನಿಗೆ ಸಲ್ಲುತ್ತದೆ. ವಿದುರನ ನೀತಿಯ ಪಾಲನೆಯ ಅನಿವಾರ್ಯತೆಯನ್ನು, ಅದುವೇ ಜೀವನ ಸಾರ್ಥಕತೆಯ ಮಾನದಂಡ ಎಂಬಂತಿರುವ ಅಂಶಗಳು ಈ ಕೃತಿಯ ವಿಶೇಷತೆಗಳಾಗಿವೆ.
©2024 Book Brahma Private Limited.