ಸಿ.ಎನ್.ರಾಮಚಂದ್ರನ್ ಅವರ ಕೃತಿ ‘ತೌಲನಿಕ ಸಾಹಿತ್ಯ’. ತಾತ್ವಿಕ ಹಾಗೂಆನ್ವಯಿಕ ನೆಲೆಗಳು ಎಂಬ ಉಪಶೀರ್ಷಿಕೆಯನ್ನು ಹೊಂದಿದೆ. ಎಲ್. ಎಸ್. ಶೇಷಗಿರಿರಾವ್ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.
'ತೌಲನಿಕ ಸಾಹಿತ್ಯ ನಮ್ಮಲ್ಲಿ ಒಂದು ಪ್ರತ್ಯೇಕ ಅಧ್ಯಯನ ಶಾಖೆಯಾದದ್ದು ಈಚೆಗಿನ ದಶಕಗಳಲ್ಲಿ, ಆಧುನಿಕ ಕನ್ನಡ ಸಾಹಿತ್ಯ ಯುಗದ ಪ್ರಾರಂಭದಲ್ಲಿಯೇ ವ್ಯಾಸ ಪಂಪ, ವ್ಯಾಸ-ಕುಮಾರವ್ಯಾಸ ಮೊದಲಾದ ಅಧ್ಯಯನಗಳು ನಡೆದಿದ್ದರೂ ತೌಲನಿಕ ಅಧ್ಯಯನ ಮತ್ತು ತೌಲನಿಕ ಸಾಹಿತ್ಯಗಳ ನಡುವೆ ವ್ಯತ್ಯಾಸವನ್ನು ಗುರುತಿಸಿದ್ದು ಈಚೆಗೆ ಎಲ್ಲ ತೌಲನಿಕ ಅಧ್ಯಯನವೂ ತೌಲನಿಕ ಸಾಹಿತ್ಯವಲ್ಲ ಎನ್ನುವುದನ್ನು ಗುರುತಿಸಿರುವುದು ಕೂಡ ಈಚೆಗೆ ಅಮೆರಿಕ, ಫ್ರಾನ್ಸ್ ಮತ್ತು ರಷ್ಯಾಗಳಲ್ಲಿ ಇದು ಪ್ರಾರಂಭದಲ್ಲಿ ವಿದ್ವಾಂಸರನ್ನು ಆಕರ್ಷಿಸಿತು. ಪಾಶ್ಚಾತ್ಯ ಜಗತ್ತಿನಲ್ಲಿ ಇದರ ಅಧ್ಯಯನ ಮುಂದುವರೆದು 'ಥಿಮ್ಯಾಟಿಕ್ಸ್', 'ಪ್ರಭಾವ', 'ಅನುಕರಣೆ', 'ಸ್ವೀಕರಣೆ' ಮೊದಲಾದ ಹಲವಾರು ಶಾಖೆಗಳು ಸಂವೃದ್ಧವಾಗಿ ಬೆಳೆದಿವೆ. ಹೊಸದಾಗಿ ಬೆಳೆಯುತ್ತಿರುವ ಈ ಅಧ್ಯಯನ ಕ್ಷೇತ್ರದಲ್ಲಿ ಖಚಿತವಾದ ಪರಿಕಲ್ಪನೆಗಳ ಅಗತ್ಯವಿದೆ'.ಈ ಸಂಗ್ರಹದಲ್ಲಿ ತೌಲನಿಕ ಸಾಹಿತ್ಯವನ್ನು ಕುರಿತ ಲೇಖನಗಳ ಒಂದು ವೈಶಿಷ್ಟ್ಯವೆಂದರೆ ಸಂಕ್ಷಿಪ್ತವಾದರೂ ಸಮಗ್ರವಾಗಿರುವುದು. ಹದಿನೈದು ಪುಟಗಳ ಮೊದಲನೆಯ ಲೇಖನದಲ್ಲಿ ಸಿ. ಎನ್. ರಾಮಚಂದ್ರನ್ ಅವರು ತೌಲನಿಕ ಸಾಹಿತ್ಯದ ಮುಖ್ಯ ಪ್ರಕಾರಗಳನ್ನು ಪರಿಚಯ ಮಾಡಿಕೊಡುವುದಲ್ಲದೆ ಹಲವು ಕುತೂಹಲಕರ ಒಳನೋಟಗಳನ್ನು ನೀಡುತ್ತಾರೆ. 'ಯಯಾತಿ ಆರ್ಕಿಟೈಪ್", 'ಈಡಿಪಸ್ ಆರ್ಕಿಟೈಪ್'ಗಳ ಪ್ರಸ್ತಾಪ ಬಹುಕುತೂಹಲಕರವಾಗಿದೆ’ ಎಂದು ಎಲ್. ಎಸ್. ಶೇಷಗಿರಿರಾವ್ ಅವರು ಹೇಳಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ತೌಲನಿಕ ಸಾಹಿತಯ ವ್ಯಾಖ್ಯಾನ, ಭಾರತೀಯ ಮತ್ತು ಪಾಶ್ಚಿಮಾತ್ಯ ಸೃಷ್ಟಿ ಪುರಾಣಗಳಲ್ಲಿ ಅಸುರೀಶಕ್ತಿಯ ಸಮಸ್ಯೆ, ಭಾರತೀಯ-ಪಾಶ್ಚಿಮಾತ್ಯ ‘ಮಹಾಕಾವ್ಯಗಳು’: ತೌಲನಿಕ ಪ್ರಭೇದ ವ್ಯಾಖ್ಯಾನ, ಭಾರತೀಯ-ರಷ್ಯನ್-ಚೀನಿ ರೂಪನಿಷ್ಠ ವಿಮರ್ಶಾ ಪ್ರಸ್ಥಾನಗಳಲ್ಲಿ ‘ವಕ್ರೋಕ್ತಿ’ಯ ಪರಿಕಲ್ಪನೆ, ಗೋವಿಂದ ಸಾಮಂತ ಮತ್ತು ಇಂದಿರಾಬಾಯಿ: ಮೊದಲಘಟ್ಟದ ಭಾರತೀಯ ಇಂಗ್ಲಿಷ್ ಮತ್ತು ಕನ್ನಡ ಸಾಮಾಜಿಕ ಕಾದಂಬರಿಗಳು, ಮಾಸ್ತಿ ಅವರ ನವರಾತ್ರಿ ಮತ್ತು ಭಾಸರ್ ನ ಕ್ಯಾಂಟರಿ ಬರಿ ಟೇಲ್ಸ್ ಒಂದು ವಿಸ್ತೃತ ವಿಶ್ಲೇಷಣೆ ಎಂಬ ಶೀರ್ಷಿಕೆಗಳಿವೆ
©2024 Book Brahma Private Limited.