ಲೇಖಕಿ ನಳಿನಿ ಮೂರ್ತಿ ಅವರ ಕೃತಿ ಸಾಹಿತ್ಯ ವಿಜ್ಞಾನ ಸಂಕೀರ್ಣ. ವ್ಯಕ್ತಿ ಬೆಳೆದು ದೊಡ್ಡವನಾದಂತೆ ಯಾವುದೇ ಒಂದರಿಂದ ವಶೀಕೃತನಾಗಿ ಅದರ ಅನುಶೀಲನೆಯನ್ನೇ ತನ್ನ ವೃತ್ತಿಯೆಂದು ಆಯುವುದು ವಾಡಿಕೆ. ಆಗ ಇನ್ನೊಂದು (ಸಾಹಿತ್ಯ ಅಥವಾ ವಿಜ್ಞಾನ) ಹವ್ಯಾಸವಾಗುತ್ತದೆ. ಹೀಗೆ ವಿಜ್ಞಾನಿಗಳ – ಸಾಹಿತಿಗಳ ಬಳಗಗಳು ಕೆನೆಗಟ್ಟುತ್ತವೆ. ತೀರ ವಿರಳವಾಗಿ ಕೆಲವು ಪ್ರತಿಭಾನ್ವಿತರು ಉಭಯ ಪ್ರಕಾರ ಗಳಲ್ಲಿಯೂ ಪ್ರಾವೀಣ್ಯತೆ ಗಳಿಸಿ, ನವಶೈಲಿಯ ಪ್ರವರ್ತಕರಾಗುವುದುಂಟು. ಇವರಿಗೆ ‘ವಿಜ್ಞಾನವೆನ್ನೊಡಲು ಸಾಹಿತ್ಯವೆನ್ನುಸಿರು’ ಅಥವಾ ‘ಸಾಹಿತ್ಯವೆನ್ನೊಡಲು’ ವಿಜ್ಞಾನವೆನ್ನುಸಿರು ಆಗಿರುತ್ತದೆ.
©2024 Book Brahma Private Limited.