’ಪುರಂದರ ಸಾಹಿತ್ಯ ಅಧ್ಯಯನ' ಎಂಬ ಈ ಸಂಪಾದನ ಕೃತಿ, ಹೊಸ ಪೀಳಿಗೆಯ ವಿಮರ್ಶಕರು ಪುರಂದರರ ಕೀರ್ತನೆಗಳನ್ನು ಸಾಂಸ್ಕೃತಿಕ ನೆಲೆಯಲ್ಲಿ ಗ್ರಹಿಸಿದ್ದಾರೆ. ಈ ಕೃತಿಯಲ್ಲಿ ಹೊಸ ವಿಮರ್ಶಕರು ತಾವು ಕಂಡಂತೆ ಪುರಂದರ ದಾಸರ ಕೀರ್ತನೆಗಳ ಕುರಿತು ವಿಮರ್ಶಿಸಿದ್ದಾರೆ. ಪುರಂದರರು ಹರಿದಾಸ ಪರಂಪರೆಯಲ್ಲಿ ಸಮರ್ಥ ಪ್ರತಿನಿಧಿಯಾಗಿ ನಿಂತವರು. ಅವರ ಕೀರ್ತನೆಗಳು ಓದುಗರ ಸತ್ಯ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಇದು ಶತಮಾನಗಳ ಉದ್ದಕ್ಕೂ ನಿರಂತರವಾಗಿ ನಡೆದುಬಂದಿದೆ. ಈ ಹೊತ್ತಿನ ಸಾಂಸ್ಕೃತಿಕ ವಿದ್ಯಮಾನಗಳ ನೆಲೆಯಲ್ಲಿ ಪುರಂದರರ ಕೀರ್ತನೆಗಳನ್ನು ಅಧ್ಯಯನಕ್ಕೆ ಒಳಪಡಿಸಿದರೂ ಗೆಲ್ಲುತ್ತವೆ. ಪ್ರಭುತ್ವ, ಸಮಾಜ, ಅನುಭಾವ, ದೇಸೀಯತೆ, ಲೋಕದೃಷ್ಟಿ, ಜೀವನಪ್ರೀತಿ ಮುಂತಾದ ಪರಿಕಲ್ಪನಾತ್ಮಕ ವಸ್ತುಗಳ, ವಿಷಯಗಳ ಶೋಧಕ್ಕೆ ಪುರಂದರರ ಕೀರ್ತನೆಗಳು ಆಕರವಾಗಿ ಬಳಕೆಯಾಗಿರುವುದು ವಿಶೇಷವೇ.
©2024 Book Brahma Private Limited.