ಅನುಭವಿ ವಿದ್ವಾಂಸರಾದ ಮಾಧವ ಪೆರಾಜೆಯವರ ’ಪಂಪಪೂರ್ವದ ಕನ್ನಡ ಕವಿಗಳು’ ಕೃತಿಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡವನ್ನು ಪರೀಕ್ಷಾ ವಿಷಯವಾಗಿ ಪರಿಗಣಿಸಿರುವ ವಿದ್ಯಾರ್ಥಿಗಳಿಗಾಗಿ ಪ್ರಕಟಿಸಿದ್ದಾರೆ.
ಆದ್ದರಿಂದ ಇಲ್ಲಿ ವಿಮರ್ಶಾ ಪರಿಭಾಷೆಯಾಗಲಿ, ಅಡಿಟಿಪ್ಪಣಿಗಳಾಗಲೀ ಕಾಣುವುದಿಲ್ಲ. ಆದರೆ ಕವಿಯ ಜೀವನ ವೃತ್ತಾಂತ, ಕೃತಿಗಳ ವಸ್ತು, ಭಾಷೆ, ಶೈಲಿಗಳ ಪರಿಚಯ ಹಾಗೂ ಕೃತಿಗಳ ಮೌಲ್ಯಮಾಪನವನ್ನು ಜವಬ್ದಾರಿಯಿಂದ ಮಾಡಲಾಗಿದೆ.
ಪುಸ್ತಕದಲ್ಲಿ ಪಂಪನ ಕೃತಿಗಳ ವಿನ್ಯಾಸ, ಶೈಲಿಯ ಬೆರಗು ಬೆಡಗುಗಳನ್ನು, ಪಾತ್ರ ಚಿತ್ರಣದ ರೀತಿಯನ್ನು, ಪಂಪ ಮಾರ್ಗದ ಲಕ್ಷಣಗಳನ್ನೂ ಸೊಗಸಾಗಿ ವಿವರಿಸಲಾಗಿದೆ.
©2025 Book Brahma Private Limited.