‘ಮೊದಲ ಓದಿನ ಸುಖ’ ಲೇಖಕ ಡಾ. ನಾ. ಮೊಗಸಾಲೆ ಅವರ ಕೃತಿ. ಒಟ್ಟು 12 ಲೇಖಕರ ಪುಸ್ತಕಗಳಿಗೆ ಬರೆದ ಮುನ್ನುಡಿಗಳ ಗುಚ್ಛ. ಈ ಕೃತಿಗೆ ಡಾ. ಹಳೆಮನೆ ರಾಜಶೇಖರ ಅವರು ಬೆನ್ನುಡಿ ಬರೆದು ‘ಳೆದ ಅರವತ್ತು ವರ್ಷಗಳಿಂದ ನಿರಂತರ ಸೃಜನಶೀಲ ಬರವಣೆಗೆಯಲ್ಲಿ ವಾಸ್ತವಿಕ ಜೀವನ ದರ್ಶನವನ್ನು ಕಟ್ಟುತ್ತಾ ಬಂದಿರುವ ನಾ. ಮೊಗಸಾಲೆಯವರು, ಸಾಂಸ್ಕೃತಿಕ ಮನಸ್ಸಿನ ಸ್ಥಿತಪ್ರಜ್ಞರು. ಪ್ರಸ್ತುತ ಕೃತಿಯಲ್ಲಿ ವಿವಿಧ ಲೇಖಕರ ಪುಸ್ತಕಗಳಿಗೆ ಬರೆದ ಮುನ್ನುಡಿಗಳಿವೆ. ಮುನ್ನುಡಿಗಳು ಗಾಯಗಳಾಗದೆ ತಾಯಿಯಂತೆ ಹಾಲುಣಿಸುವ, ಮೊಳಕೆ ನುಂಗಿದ ಬೀಜದಂತಿರಬೇಕೆಂಬುದು ಅವರ ನಿಲುವು. ಪಠ್ಯಗಳ ಅಂತರಂಗವನ್ನು ಒಳಹೊಕ್ಕು ಪಠ್ಯೀಕರಣಗೊಳಿಸುವುದು ಈ ಬರಹಗಳ ವಿಶೇಷ. ಇಲ್ಲಿ ಡಾ. ಶ್ರೀಪಾದ ಶೆಟ್ಟಿ ಅವರ ನುಡಿಗನ್ನಡಿ, ಡಾ.ಬಿ. ಜನಾರ್ದನ ಭಟ್ ಅವರ ಎಚ್ಚೆ ಹೋಮೋ: ನೋಡಿ ಈ ಮನುಷ್ಯನನ್ನು, ವಿಷ್ಣ ಭಟ್ ಡೋಂಗ್ರೆ ಅವರ ಸ್ಮೃತಿ ವಿಸ್ಮೃತಿಗಳ ನಡುವೆ, ಶಾಂತರಾಜ ಐತಾಳರ ಸಾಮಾನ್ಯರಾಗಬೇಡಿ ಶ್ರೇಷ್ಠರಾಗಿ, ಇರ್ಶಾದ್ ಮೂಡುಬಿದರೆ ಅವರ ಖರ್ಜೂರದ ಮರದಲ್ಲಿ ಕೋಗಿಲೆ, ಉಜ್ರೆ ಈಶ್ವರ ಭಟ್ ಹುಡುಕಾಟದ ದಾರಿ, ಟಿ.ಎ.ಎನ್ ಖಂಡಿಗೆ ಅವರ ಸೋಂಕಿನ ಸೋಜಿಗ, ಅಂಬಾತನಯ ಮುದ್ರಾಡಿಯವರ ನಾಟಕ ರಾಮರಾಜ್ಯ, ರಂಜನಿ ನಾಯಕ್ ಅವರ ಹಾರಲು ಆಗಸ ಈಜಲು ಸಾಗರ, ಜಯದೇವಪ್ಪ ಜೈನಕೇರಿ ಅವರ ವಚನ ರಶ್ಮಿ, ಲಲಿತಾ ಕೆ. ಹೊಸಪ್ಯಾಚಿ ಅವರ ಕವನ ಸಂಗ್ರಹ ವೈಶಾಖ ಶುದ್ಧ ಹುಣ್ಣಿಮೆಯ ದಿವಸ ಹಾಗೂ ಡಾ. ಕೆ.ಬಿ. ಪವಾರ್ ಅವರ ಕವನ ಸಂಗ್ರಹ ಬುದ್ಧ ನೀ ನೆನಪಾಗುತ್ತಿ ಎಂಬ ಮುನ್ನುಡಿಗಳು ಸಂಕಲನಗೊಂಡಿವೆ.
©2024 Book Brahma Private Limited.