ಕಲಬುರ್ಗಿ ಅವರು ತಮ್ಮ ಲೇಖನಗಳ ಸಂಪುಟಗಳಾದ ಮಾರ್ಗದ ಆರು ಸಂಪುಟಗಳನ್ನು ಏಕಕಾಲಕ್ಕೆ ಪ್ರಕಟಿಸುವ ಯೋಜನೆಯ ಅಂಗವಾಗಿ ಪ್ರಕಟವಾದ ಮೊದಲ ಆವೃತ್ತಿ ಇದು.
ಪ್ರಸ್ತಾವನೆ, ಅರಿಕೆ, ಸಂಪಾದಕೀಯ ಎಂಬ ಮೂರು ವಿಭಾಗಗಳನ್ನು ಒಳಗೊಂಡಿದೆ. 'ಪ್ರಸ್ತಾವನೆ' ವಿಭಾಗವು ವಿವಿಧ ಕೃತಿಗಳಿಗೆ ಇವರು ಬರೆದು ಮಾರ್ಗ ಸಂಪುಟ ಮೂರರಲ್ಲಿ ಪ್ರಕಟಿಸಿದ್ದ 15 ಪ್ರಸ್ತಾವನೆಗಳು ಪರಿಷ್ಕೃತಗೊಂಡು ಇಲ್ಲಿ ಮರುಮುದ್ರಣಗೊಂಡಿವೆ. ಜೊತೆಗೆ ಇವರು ಹೊಸದಾಗಿ ಬರೆದಿದ್ದ 14 ಪ್ರಸ್ತಾವನೆಗಳೂ ಇಲ್ಲಿ ಸೇರಿವೆ. ವಚನ, ಕೇಶಿರಾಜ, ಆದಯ್ಯ, ಮಲ್ಲಿನಾಥ ಮೊದಲಾದವರ ಕೃತಿಗಳನ್ನು ಶೋಧಿಸಿ, ಪರಿಷ್ಕರಿಸಿ ಪ್ರಕಟಿಸುವ ಸಂದರ್ಭದಲ್ಲಿ ಬರೆದ ವಿಸ್ತೃತವಾದ ಪ್ರಸ್ತಾವನೆಗಳೂ ಇಲ್ಲಿವೆ.
'ಅರಿಕೆ'ಎಂಬ ಎರಡನೆಯ ಭಾಗದಲ್ಲಿ ಗ್ರಂಥ ಸಂಪಾದನೆ, ಹಸ್ತಪ್ರತಿ, ಸಂಶೋಧನ , ನಾಮವಿಜ್ಞಾನಗಳಂತ ಶಾಸ್ತ್ರಕೃತಿಗಳಿಗೂ ಮತ್ತು ಮಾಹಾರಾಷ್ಟ್ರದ ಕನ್ನಡ ಶಾಸನ ಹಾಗೂ ಸಮಾಧಿ ಬಲಿದಾನ ವೀರಮರಣಗಳಂತಹ ಸ್ಮಾರಕ ಕೃತಿಗಳಿಗೆ ಬರೆದ ನಿವೇದನೆರೂಪದ ಬರಹಗಳೂ ಇಲ್ಲಿವೆ.
'ಸಂಪಾದಕೀಯ' ವಿಭಾಗದಲ್ಲಿ ಬೇರೆಯವರು ರಚಿಸಿದ ಆಧುನಿಕ ಪುಸ್ತಕಗಳಿಗೆ ಕಲಬುರ್ಗಿ ಅವರು ಬರೆದ ಸಂಪಾದಕೀಯ ಲೇಖನಗಳಿವೆ. 2010ರಲ್ಲಿ ಸಪ್ನ ಬುಕ್ ಹೌಸ್, ಬೆಂಗಳೂರು ಮೊದಲಿಗೆ ಈ ಸಂಪುಟ ಪ್ರಕಟಿಸಿತ್ತು.
©2024 Book Brahma Private Limited.