ಸಂಶೋಧಕ-ವಿದ್ವಾಂಸ ಎಂ.ಎಂ. ಕಲಬುರ್ಗಿ ಅವರ ಲೇಖನಗಳ ಸಂಪುಟಗಳ ಮೂರನೇ ಸಂಪುಟ ಇದು. ಪ್ರಸಕ್ತ ಸಂಪುಟದಲ್ಲಿ ಪ್ರಬಂಧ, ಚಿಂತನ, ನಿರ್ವಚನ, ಪ್ರಸ್ತಾವನೆ ಎಂಬ ನಾಲ್ಕು ವಿಭಾಗಗಳಿವೆ.
ಪ್ರಾಚೀನ ಕನ್ನಡ ಸಾಹಿತ್ಯ, ನಡುಗನ್ನಡ ಸಾಹಿತ್ಯ, ಆಧುನಿಕ ಕನ್ನಡ ಸಾಹಿತ್ಯ ಎಂಬ ನಾಲ್ಕು ಘಟ್ಟಗಳಲ್ಲಿ ಸಂಭವಿಸಿದ ಚಳುವಳಿ, ಪ್ರತಿಭಟನೆ, ಅಭಿನವ ಪಂಪನ ಅನನ್ಯತೆ, ಜೈನ, ವೀರಶೈವ ಧರ್ಮಗಳ ವಿಲಕ್ಷಣತೆ, ಪ್ರಾಚೀನ ಕರ್ನಾಟಕದಲ್ಲಿ ದೇವಾಲಯಗಳ ನಾಶದ ವಿಚಾರ, ಫ್ಲೀಟ್ ಸಂಗ್ರಹಿಸಿದ ಸ್ವಾತಂತ್ರ್ಯಸಮರದ ಲಾವಣಿ ಸಾಹಿತ್ಯ, ಕೆಳದಿ ಮತ್ತು ಸ್ವಾಧಿ ಸಂಸ್ಥಾನಗಳ ವಿಚಾರ, ನಾಟಕ, ಗೋವಿಂದಪೈ, ಹರ್ಡೇಕರ್ ಮಂಜಪ್ಪ, ಶಾತಿರಾಜ ಶಾಸ್ತ್ರಿಗಳ ಸಂಶೋಧನೆ, ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರಗಳಿವೆ.
ಚಿಂತನ ವಿಭಾಗದಲ್ಲಿ ಪಂಪನ ಧರ್ಮ, ಚಂಪೂ, ಪ್ರಬಂಧ ಮತ್ತು ಪ್ರಸಂಗ ಕುರಿತು ಚರ್ಚೆ, ಕೆಲವು ಜನಪದ ಆಚರಣೆಗಳು, ಕಲ್ಯಾಣದ ಕಟ್ಟುವಿಕೆಗೆ ಸಂಬಧಿಸಿದ ವಿಚಾರ, ತೊಳ್ಕಾಪ್ಪಿಯಂ ಹಾಗೂ ಕವಿರಾಜಮಾರ್ಗ ಕೃತಿಗಳ ಸ್ವರೂಪ ಕುರಿತ ಲೇಖನಗಳಿವೆ.
ಮೂರನೆಯ ಅಧ್ಯಯನ ವಿಭಾಗದಲ್ಲಿ ಶರಣರು, ಶರಣ ಸಾಹಿತ್ಯ, ಆ ಸಾಹಿತ್ಯದಲ್ಲಿ ಪ್ರಯೋಗಗೊಂಡಿರುವ ವಿಶಿಷ್ಟ ಪರಿಭಾಷೆ, ಪರಿಕಲ್ಪನೆಗಳ ಚರ್ಚೆ, ವಿವೇಚನೆ, ವಿಶ್ಲೇಷಣೆಗಳಿವೆ.
ಪ್ರಸ್ತಾವನೆ ಎಂಬ ನಾಲ್ಕನೆಯ ಭಾಗದಲ್ಲಿ ಶರಣರು, ವಚನ ಸಾಹಿತ್ಯ, ವ್ಯಾಕರಣ ಕೃತಿ, ಸಾಂಗತ್ಯ ಕೃತಿ, ಕೈಫಿಯತ್ ಮುಂತಾದ ಸಂಪಾದಿತ ಕೃತಿಗಳಿಗೆ ಬರೆದ ಮೌಲಿಕ ಪ್ರಸ್ತಾವನೆಗಳನ್ನು ಸಂಗ್ರಹಿಸಲಾಗಿದೆ.
ಈ ಗ್ರಂಥವನ್ನು 1997ರಲ್ಲಿ ಎಸ್ ಬಿ. ಎಸ್ ಪಬ್ಲಿಷರ್, & ಡಿಸ್ಟ್ರಿಬ್ಯೂಟರ್ಸ, ಬೆಂಗಳೂರು ಮೊದಲಿಗೆ ಪ್ರಕಟಿಸಿತ್ತು. ನಂತರದ ಆವೃತ್ತಿಗಳನ್ನು ಸಪ್ನ ಬುಕ್ ಹೌಸ್, ಬೆಂಗಳೂರು ಪ್ರಕಟಿಸಿದೆ.
©2024 Book Brahma Private Limited.