ಶರಣ ಚಳವಳಿ ಕರ್ನಾಟಕದಾಚೆಗೂ ಬೀರಿದ ಪ್ರಭಾವ ಅಪಾರ. ಅದು ನಾಡಿನ ಹೊರಗೆ ಶರಣ- ಶರಣೆಯರನ್ನು ಹುಟ್ಟುಹಾಕಿದ ರೀತಿ ರೋಮಾಂಚನ ಮೂಡಿಸುವಂತಹುದು.
ಅಫ್ಘಾನಿಸ್ಥಾನದ ಮರುಳ ಶಂಕರದೇವ, ಜಮ್ಮು ಕಾಶ್ಮೀರದ ಮೋಳಿಗೆ ಮಹಾದೇವ, ಭೋಪಾಲದ ಮಹಾದೇವಮ್ಮ-ಬೊಂತಾದೇವಿ, ಮಧ್ಯಪ್ರದೇಶದ ಡೋಹರ ಕಕ್ಕಯ್ಯ, ಉತ್ತರಪ್ರದೇಶದ ಶಿವಲೆಂಕ ಮಂಚಣ್ಣ, ಗುಜರಾತಿನ ಆದಯ್ಯ, ಒಡಿಶಾದ ನನ್ನಯ್ಯ-ಸುಜ್ಞಾನಿದೇವ, ಮಹಾರಾಷ್ಟ್ರದ ಸಿದ್ಧರಾಮೇಶ್ವರ, ಅಮುಗಿದೇವಯ್ಯ-ರಾಯಮ್ಮ ದಂಪತಿಗಳು; ಗಜೇಶ ಮಸಣಯ್ಯ ದಂಪತಿ ಹಾಗೂ ಉರಿಲಿಂಗದೇವ-ಉರಿಲಿಂಗಪೆದ್ದಿ-ಕಾಳವ್ವೆ, ಆಂಧ್ರಪ್ರದೇಶದ ಕಿನ್ನರಿ ಬ್ರಹ್ಮಯ್ಯ-ತೆಲುಗೇಶ ಮಸಣಯ್ಯ-ಮೈದುನ ರಾಮಯ್ಯ-ಹಡಪದ ರೇಚಯ್ಯ, ಕೇರಳದ ಗೊಗ್ಗಯ್ಯ, ತಮಿಳುನಾಡಿನ ಮಾದರ ಚೆನ್ನಯ್ಯ-ಮೆರೆಮಿಂಡಯ್ಯ-ತಂಗಟೂರ ಮಾರಯ್ಯ ಹೀಗೆ ಪ್ರಾದೇಶಿಕ ಭಿನ್ನತೆಯಾಚೆಗೆ ಜಾತ್ಯತೀತತೆ, ಭ್ರಾತೃತ್ವವನ್ನು ಸಾರಿದವರ ವಿವರಗಳು ಕಿರುಹೊತ್ತಿಗೆಯಲ್ಲಿವೆ.
ಶರಣ ಚಳವಳಿಯ ’ವಿಶ್ವರೂಪ’ವನ್ನು ಅರಿಯಲು ಯತ್ನಿಸುವವರಿಗೆ ಸಂಗ್ರಹಯೋಗ್ಯ ಕೃತಿ.
©2024 Book Brahma Private Limited.