ಕಾನೂನು ಏನು ಹೇಳುತ್ತೆ?

Author : ಕೌಂಡಿನ್ಯ ನಾಗೇಶ

Pages 120

₹ 164.00




Year of Publication: 2016
Published by: ಜಾಗೃತಿ ಪ್ರಿಂಟರ್‍ಸ್‌
Address: ನರಸಿಂಹಯ್ಯ ಗಾರ್ಡನ್‌, ಕೊಟ್ಟಿಗೆ ಪಾಳ್ಯ, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು 560 091
Phone: 9740066842

Synopsys

ಕಾನೂನು ಏನು ಹೇಳುತ್ತೆ? ಕೌಂಡಿನ್ಯ ಅವರ ದೇಶ ವಿದೇಶಗಳ ಕಾನೂನಿನ ಅಪರಾಧ ಮತ್ತು ಕಾಣೂನಿನ ವಿಶ್ಲೇ಼ಷಣೆ ಆಧಾರಿತ ಕೃತಿಯಾಗಿದೆ. ಒಂದು ಪ್ರಾಂತ್ಯವಾಗಲಿ, ಒಂದು ರಾಜ್ಯವಾಗಲಿ ಅಥವಾ ಅಖಂಡ ದೇಶವಾಗಲಿ ಕಾನೂನು ಎಂಬುದು ಹಿಂದೆ ಇತ್ತು. ಈಗ ಬದಲಾಗಿರುವ ರೂಪದೊಂದಿಗೆ ಅನುಷ್ಠಾನದಲ್ಲಿದೆ, ಇತ್ತೀಚಿಗಿನ ವರ್ಷಗಳಲ್ಲಿ ಒಂದು ದೇಶಕ್ಕೆ ಒಂದೇ ರೀತಿಯ ಕಾನೂನಿನ ವ್ಯವಸ್ಥೆ ಇದೆ. ಆ ದೇಶದಲ್ಲಿ ಪ್ರಜಾಪ್ರಭುತ್ವ ಇರಲಿ ಅಥವಾ ಕಮ್ಯುನಿಸಂ ಇರಲಿ ಅಥವಾ ಡಿಕ್ಟೇಟರ್‌ಂಪ್‌ ಇರಲಿ, ದೇಶದ ಉದ್ದಗಲಕ್ಕೂ ಒಂದೇ ರೀತಿಯ ಕಾನೂ ಅನ್ವಯವಾಗುತ್ತದೆ. ಏನನ್ನು ಮಾಡಬಾರದು? ಏನು ಮಾಡಿದರೆ ತಪ್ಪಾಗುತ್ತದೆ? ಆ ತಪ್ಪಿಗೆ ಶಿಕ್ಷೆ ಏನು? ಒಂದು ದೇಶಲ್ಲಿ ವಾಸ ಮಾಡುತ್ತಿರುವವರು ಪಾಲಿಸಬೇಕಾದ ನಿಯಮಗಳೇನು? ಆ ನಿಯಮಗಳನ್ನು ಮೀರಿದರೆ ಯಾವ ಶಿಕ್ಷೆ ಆಗುತ್ತದೆ? ಇದೆಲ್ಲವನ್ನೂ ರೂಪಿಸಲಾಗುತ್ತದೆ. ಈಗ ದೇಶಕ್ಕೆ ಒಂದೇ ಮಾದರಿಯ ಕಾನೂನು, ಆದರೆ ಹಿಂದೆ ಆ ರೀತಿ ಇರಲಿಲ್ಲ. ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯಕ್ಕೆ ಮತ್ತು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಈ ಕಾನೂನು ಬೇರೆ ಬೇರೆ ಆಗಿರುತ್ತಿತ್ತು. ಅಪರಾಧ ಎಂಬುದು ಸರ್ವಕಾಲಿಕ ಮತ್ತು ಸರ್ವ ವ್ಯಾಪಕ ಹಲವಾರು ಮಂದಿ ಒಂದು ಬಡಾವಣೆಯಲ್ಲಿ ಅಥವಾ ಒಂದೇ ವಾಸವಾಗಿದ್ದಾರೆ ಎಂದರೆ ಅಲ್ಲಿ ಯಾವ ರೀತಿಯಿಂದಲಾದರೂ ಸಹ ಅಪರಾಧ ನಡೆಯುತ್ತದೆ. ಇದರ ಸ್ವರೂಪ ಬದಲಾಗಿರುತ್ತದೆ. ಅಪರಾಧದ ಪ್ರಮಾಣ ಹೆಚ್ಚು ಅಥವಾ ಕಡಿಮೆ ಆಗಿರಬಹುದು. ಆದರೆ ಪ್ರತಿನಿತ್ಯ, ಪ್ರತಿಕ್ಷಣ ಎಲ್ಲಾದರೊಂದು ಕಡೆ ಅಪರಾಧ ನಡೆಯುತ್ತಿರುತ್ತದೆ. ಈ ಅಪರಾಧ ನಡೆಯದ ಕ್ಷಣ ಇಲ್ಲವೇ ಇಲ್ಲ. ಪ್ರತಿ ನಿಮಿಷ. ಕ್ಷಣಗಳಲ್ಲಿ ಮನುಷ್ಯ ತಪ್ಪು ಮಾಡುತ್ತಿರುತ್ತಾನೆ. ಅಂತಹ ಅಪರಾಧಗಳ ವಿಶ್ಲೇಷಣೆ ಮಾಡುತ್ತಾ, ಅದಕ್ಕೆ ಸಂಬಂಧ ಪಡುವ ಶಿಕ್ಷೆ ಏನು ಎಂಬುದನ್ನು ತಿಳಿಸುವುದೇ.. ಕೃತಿ ಎಂದು ಪುಸ್ತಕದ ಹಿನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಕೌಂಡಿನ್ಯ ನಾಗೇಶ

  ಕೌಂಡಿನ್ಯ   ಕಾವ್ಯನಾಮದಿಂದ  ಪ್ರಸಿಧ್ದಿಯನ್ನು  ಪಡೆದಿರುವ ವೈ.ಎನ್‌ ನಾಗೇಶ್‌ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು . ತಂದೆ ನಾರಾಯಣ ರಾವ್‌ ತಾಯಿ ಜಯಲಕ್ಷ್ಮಿ . ಮೂವತ್ತೆರಡು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದಾರೆ. ಇವರು ಮಂಗಳ, ತರಂಗ, ಸುಧಾ, ಕನ್ನಡ ಪ್ರಭ, ಪ್ರಜಾವಾಣಿ ,ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಕನ್ನಡ ಭಾಷಾ ಸಂಶೋಧನಾ ಕೃತಿ, ಚಾರಿತ್ರಿಕ ಕೃತಿ, ಪೌರಾಣಿಕ ಗ್ರಂಥಗಳು ,ಧಾರ್ಮಿಕ ಮತ್ತು ಸಾಮಾನ್ಯ ಲೇಖನಗಳು, ಸಣ್ಣ ಕತೆಗಳು , ಕವನ ಸಂಕಲನಗಳು,  ಚಲನಚಿತ್ರಗಳು  ರಚಿಸಿದ್ದಾರೆ.   ಪ್ರಶಸ್ತಿ ...

READ MORE

Related Books