ಡಾ. ರಾಜಶ್ರೀ ಅವರ ಕನ್ನಡ ಭಾಷಾ ಸಂಪದ ಕೃತಿ ಈ ಪ್ರಕಾರದಲ್ಲಿ ಗಮನಾರ್ಹವಾದುದು. ವಿಮರ್ಶೆಯಲ್ಲಿ ಅವರ ಪೂರಕ ಓದಿನ ಆಳದ ಸಂಶೋಧನ ಲೇಖನಗಳಲ್ಲಿ ಅವರು ನೀಡುವ ಮಾಹಿತಿ, ವಿಚಿತ್ರ ಕೆ ಆ ಬರಹಗಳಿಗೆ ಅರ್ಥ ಪೂರ್ಣತೆಯನ್ನು ನೀಡುತ್ತದೆ. ಚಚೇತಕೊಪ್ಪ ಚನ್ನವೀರ ಶರಣರ ನುಡಿ ಮುತ್ತುಗಳನ್ನು ಕುರಿತು ಎರಡು ಆರಾ ಬು ದೀರ್ಘವಾದವುಗಳು, ಅವುಗಳ ಭಾವ, ಅರ್ಥ, ಒಳಾರ್ಥಗಳನ್ನು ಆಳವಾದ ಅಧ್ಯಯನದದಿಂದ ಅವರು ಉದಾಹರಿಸುವ ಬಸವಣ್ಣನ ಕಾಲದ ಸರ ವಚನಗಳು ಸಾಂಧಾರ್ಭಿಕವಾಗಿ ನುಡಿಮುತ್ತಿನ ಅರ್ಥಕ್ಕೆ ಹೆಚ್ಚು ಮೌಲ್ಯವನ್ನು ಕೊಡು ಜೊತೆಯಲ್ಲಿ ಪೂರಕವಾಗಿ ಘಟನೆಗಳನ್ನು ಕೊಡುತ್ತಾರೆ. ಸರ್ವಜ್ಞನ ಬಳಕೆಯಾಗಿವೆ. ದಾಸರ ಕೀರ್ತನೆಗಳು, ತತ್ವಪದಕಾರ ಕಡಕೊಳ ಮಡಿವಾಳಪ್ಪನವರ ತತ್ವಪದಗಳು ಇಲ್ಲಿವೆ. ಗಾದೆಮಾತುಗಳು ನುಡಿಗಟ್ಟುಗಳು- ಹೀಗೆ ಉದಾಹರಿಸುವ ದೃಷ್ಟಾಂತಗಳು: ಡಾ. ರಾಜಶ್ರೀ ಅವರ ಓದಿನ ಹರಹನ್ನು ಸ್ಪಷ್ಟಪಡಿಸುತ್ತದೆ. 'ಡಾ. ದೊಡ್ಡ ರಂಗೇಗೌಡರ ನೀಳಿತೆ' ಗಳ ಸಹೃದಯ ವಿಮರ್ಶೆ ಮಾಡಿದ್ದಾರೆ ಲೇಖಕಿ. ಒಂದು ಕೃತಿಯ ವಿಮರ್ಶೆ ಎಂದರೆ ಆ ಕೃತಿಯನ್ನು ಓದಿ, ಅರ್ಥೈಸಿಕೊಂಡು ಅದರ ಅಂತರಾರ್ಥ, ಗೂಡಾರ್ಥ, ವಾಚ್ಯಾರ್ಥಗಳನ್ನು ಓದುಗ ಸಹೃದಯರಿಗೆ, ತಿಳಿಸುವುದು. ಲೇಖಕಿ ವಿಮರ್ಶೆ ಮಾಡುವಲ್ಲಿ ಕೃತಿಯ ಒಳನೋಟ, ಸೀಳುನೋಟಗಳನ್ನು ಓದುಗರಿಗೆ ಅರಿವು ನೀಡುವಲ್ಲಿ ಸಫಲರಾಗಿದ್ದಾರೆ. ಇಲ್ಲಿಯ ಲೇಖನಗಳಲ್ಲಿ ಸಮರ್ಥ ಪದಗಳ ಬಳಕೆ, ಔಚಿತ್ಯ ಪೂರ್ಣವಾದ ಪೂರಕ ಉದ್ದರಣೆಗಳು ಬಂದು ಲೇಖನಗಳ ಮೌಲ್ಯವನ್ನು ಹೆಚ್ಚಿಸಲು ಕಾರಣವಾಗಿವೆ ಎಂದು ಡಾ. ವರದಾಶ್ರೀನಿವಾಸ್ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಪುಸ್ತಕದ ಮುನ್ನುಡಿ ಹಾಗೂ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.