ಜಾಗತೀಕರಣ ಮತ್ತು ಜಾನಪದ- ಲೇಖಕ ಗವೀಶ ಹಿರೇಮಠ ಅವರು ಬರೆದ ಕೃತಿ. ಜಾಗತೀಕರಣದ ಇಂದಿನ ಕಾಲಘಟ್ಟದಲ್ಲಿ ಜಾನಪದ ಕಲೆಗಳ ಉಳಿವಿನ ಕುರಿತು ಈ ಕೃತಿಯು ಚರ್ಚಿಸುತ್ತದೆ. ‘ಜಾಗತೀಕರಣದ ಬಗ್ಗೆ, ಜಾನಪದ ಕಲೆಗಳ ಅಳಿವು-ಉಳಿವಿನ ಬಗ್ಗೆ ಇಂದು ಚಿಂತಿಸುವುದು, ಯೋಚಿಸುವುದು ಅವಶ್ಯವಿದೆ. ಜಾಗತೀಕರಣ ಇಂದು ಒಂದು ಸವಾಲಾಗಿದೆ. ನಮ್ಮ ಕಲೆಗಳು, ನಮ್ಮ ಆಚರಣೆಗಳು, ನಮ್ಮ ಗುಡಿ ಕೈಗಾರಿಕೆಗಳ ಜೊತೆಗೆ ನಮ್ಮ ಸಂಸ್ಕೃತಿ ನಮ್ಮ ಪರಂಪರೆ ಮರೆಯಾಗುತ್ತ ಹಳ್ಳಿಗಳಲ್ಲಿಯೂ ವಿದೇಶಿ ಸಂಸ್ಕೃತಿಯ ಗಾಳಿ ಬೀಸುತ್ತಿರುವುದು ಜಾಗತೀಕರಣದ ಪ್ರಭಾವವೆನ್ನದಿರಲಾಗದು’ ಎನ್ನುವ ಮಾತುಗಳು ಈ ಕೃತಿಯ ಪ್ರಾಮುಖ್ಯತೆಯನ್ನು ವಿವರಿಸುತ್ತದೆ.
©2024 Book Brahma Private Limited.