ಕನ್ನಡದ ಶಿಷ್ಟ ಸಾಹಿತ್ಯಕ್ಕೆ ಸಾವಿರ ವರ್ಷಕ್ಕೂ ಹೆಚ್ಚುಕಾಲದ ಇತಿಹಾಸವಿದೆ. ಅದು ಎಷ್ಟು ಮತ್ತು ಹೇಗೆ ಜಾನಪದ ಸಂವೇದನೆಯನ್ನು ಕಲಾಪೂರ್ಣವಾಗಿ ಪ್ರಕಟಿಸಿದೆ ಎಂಬುದರ ತೌಲನಿಕ ಅಧ್ಯಯನ ಮಾಡುವುದು ಅತ್ಯಂತ ಫಲಪ್ರದವಾದ ಕೆಲಸ. ಈ ದೃಷ್ಟಿಯಿಂದ ಆಕಾಡೆಮಿ ಶಿಷ್ಟ ಸಾಹಿತ್ಯ ಮತ್ತು ಜಾನಪದ ಸಂವೇದನೆ ಎಂಬ ವಿಶಿಷ್ಟ ಮಾಲಿಕೆಯನ್ನು ಆರಂಭಿಸಿ ಪ್ರಾಚೀನ ಸಾಹಿತ್ಯದಿಂದ ಹಿಡಿದು ಇತ್ತೀಚಿನ ಸಾಹಿತ್ಯವನ್ನು ಜಾನಪದೀಯ ದೃಷ್ಟಿಯಿಂದ ತೌಲನಿಕವಾಗಿ ಅಧ್ಯಯನಕ್ಕೆ ಒಳಪಡಿಸುವ ಪ್ರಯತ್ನವೊಂದನ್ನು ಮಾಡುತ್ತಿದೆ. ಇದರ ಭಾಗವಾಗಿ ’ಹರಿಹರ-ರಾಘವಾಂಕ ಮತ್ತು ಜಾನಪದ’ ಪುಸ್ತಕವನ್ನು ಪ್ರಕಟಿಸಲಾಗಿದೆ. ಇಲ್ಲಿ ಹರಿಹರ ಮತ್ತು ರಾಘವಾಂಕರ ಸಾಹಿತ್ಯ ರಚನೆಗಳಲ್ಲಿನ ಜಾನಪದ ಸಂವೇದನೆಯನ್ನು ಅಧ್ಯಯನ ಮಾಡಲಾಗಿದೆ.
©2024 Book Brahma Private Limited.