'ಮಂಕುತಿಮ್ಮನ ಕಗ್ಗ' ಕವಿ ಡಿ.ವಿ.ಜಿ.ಯವರ ಮೇರು ಕೃತಿ. ಕನ್ನಡ ಸಾರಸ್ವತಲೋಕದಲ್ಲಿ ತನ್ನದೇ ಛಾಪು ಮೂಡಿಸಿದ ಕೃತಿ. ಸಾರ್ವಕಾಲಿಕ ಸತ್ಯ, ಸರ್ವಾಂಗೀಣ ಸತ್ವ ಗರ್ಭಿಕರಿಸಿಕೊಂಡು ಒಡಮೂಡಿ, ಕಾಲ ದೇಶಗಳ ಗಡಿ ಮೀರಿದ ಈ ಕೃತಿಯನ್ನು ’ಕನ್ನಡದ ಭಗವದ್ಗೀತೆ' ಎಂದು ಗುರುತಿಸಲಾಗುತ್ತದೆ. ಸಾಮಾನ್ಯರ ಮನಸೂರೆಗೊಳ್ಳುವ ಮೂಲಕ ಮನುಕುಲಕ್ಕೊಂದು ಕೈದೀವಿಗೆಯಾಗಿದೆ. ಸಮಾಜಕ್ಕೆ ಸಾಹಿತ್ಯದ ಮೂಲಕ ಅಪಾರ ಡಿ ಸತ್ಪರಿಣಾಮವನ್ನುಂಟುಮಾಡುತ್ತಿರುವ ಈ ಕೃತಿಯನ್ನು ಸರಳೀಕರಿಸಿ (ಮೂಲದ ಜೊತೆಗೆ) ಕನ್ನಡಿಗರ ಒದಗಿಸಲಾಗಿದೆ. ಖ್ಯಾತ ಕವಿಗಳಾದ ಕವಿತಾಕೃಷ್ಣ ಅವರು ವ್ಯಾಖ್ಯಾನ ಸಮೇತ ಈ ಕೃತಿ ಪುಸ್ತಕ ಅರ್ಥೈಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
©2024 Book Brahma Private Limited.