ದಮಯಂತಿ

Author : ಕೆ.ಕೆ. ಗಂಗಾಧರನ್

Pages 144

₹ 80.00




Year of Publication: 2009

Synopsys

ಸಮಕಾಲೀನ ಚಿಂತನೆಗಳಿಂದಾಗಿ ಆಧುನಿಕ ಸನ್ನಿವೇಶಕ್ಕೂ ಸುಸಂಗತವಾಗುವಂತೆ ಮಲೆಯಾಳಂನ ಖ್ಯಾತ ಲೇಖಕಿ ಕೆ.ಕವಿತಾ  ದಮಯಂತಿಯನ್ನು ಕಟ್ಟಿಕೊಟ್ಟಿದ್ದಾರೆ.

ಗಂಡನ ದೌರ್ಬಲ್ಯದಿಂದಾಗಿ ಅವನೊಡನೆ ಕಾಡುಪಾಲಾಗಿ, ಅಲ್ಲಿ ಅವನಿಂದಲೂ ತ್ಯಕ್ತಳಾಗಿ, ಕಷ್ಟಪಟ್ಟು ತವರನ್ನು ತಲುಪುತ್ತಾಳೆ. ಆದರೂ ಅವಳಿಗೆ ನಳನ ಚಿಂತೆ. ಅವನ ಸುಳಿವನ್ನು ಪತ್ತೆ ಹಚ್ಚಿಸಿ ತನ್ನ ಊರಿಗೆ ಕರೆತರಿಸುತ್ತಾಳೆ. ಇದರ ಜೊತೆಗೆ ಕಂಡುಬರುವ ದಮಯಂತಿಯ ಅಚಲ ವಿಶ್ವಾಸ ಕೃತಿಯ ಆತ್ಮವಾಗಿದೆ. 

About the Author

ಕೆ.ಕೆ. ಗಂಗಾಧರನ್
(10 March 1949)

ಕೇರಳದ ಕಾಸರಗೋಡು ಜಿಲ್ಲೆಯ ಪಾತನಡ್ಕ ಎಂಬ ಹಳ್ಳಿಯಲ್ಲಿ ಜನಿಸಿದ ಗಂಗಾಧರನ್‌ ಅವರು ಬಾಲ್ಯವನ್ನು ಕೊಡಗಿನ ಸೋಮವಾರಪೇಟೆಯ ಸಮೀಪದ ಕಬ್ಬಿಣಸೇತುವೆಯಲ್ಲಿ ಕಳೆದರು. ಕಾಜೂರು, ಸೋಮವಾರಪೇಟೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಿಂದ ಬಿಎಸ್‌ಸಿ ಪದವಿ ಪಡೆದರು. ಹಾಸನದ ಕೊಥಾರಿ ಕಾಫಿ ಕ್ಯೂರಿಂಗ್‌ ವರ್ಕ್ಸ್‌ನಲ್ಲಿ ವೃತ್ತಿ (1970) ಆರಂಭಿಸಿದ ಅವರು ನಂತರ ಅಂಚೆ ಇಲಾಖೆಯ ರೈಲ್ವೆ ಮೇಲ್‌ ಸರ್ವಿಸ್‌ ವಿಭಾಗದಲ್ಲಿ (1974) ಉದ್ಯೋಗ ಪಡೆದರು. ಅರಸೀಕೆರೆ, ತುಮಕೂರು, ಮೈಸೂರು, ಮಡಿಕೇರಿ ಹಾಗೂ ಬೆಂಗಳೂರುಗಳಲ್ಲಿ ಕೆಲಸ ಮಾಡಿದ ಅವರು ನಿವೃತ್ತ (2009)ರಾದರು. ಸದ್ಯ ಬೆಂಗಳೂರಿನ ವಿಶ್ವನೀಡಂನಲ್ಲಿ ನೆಲೆಸಿದ್ದಾರೆ.   ...

READ MORE

Related Books