ಬಸವೇಶ್ವರ ಮತ್ತು ಅವನಕಾಲ ಡಾ ದೇಸಾಯಿ ಅವರು ತಮ್ಮ ಸಮಸ್ತ ವಿದ್ವತ್ತು ಮತ್ತು ಸಂಶೋದನ ಪ್ರತಿಬೆಯನ್ನು ಸಂಗಮಿಸಿ ರಚಿಸಿದ ಮಹಕೃತಿ,ಬಾರತೀಯ ದಾರ್ಮಿಕ ಮತ್ತು ಸಮಾಜಿಕ ಉತ್ಕ್ರಾಂತಿಗೆ ವಿಶಿಷ್ಟ ಕಾಣಿಕೆ ನೀಡಿದ ಲೋಕೋತ್ತರ ವೆಕ್ತಿತ್ವದ ಬಸವೇಶ್ವರನ ಜೀವನ ಹಾಗೂ ಚಿಂತನೆಯ ಅದಿಕೃತ ವಿವರಗಳನ್ನು ಅವರು ಶೋದಿಸಿ,ಸಂಕಲಿಸಿ,ವಶ್ಲೇಷಿಸಿ ನಮೂದಿಸಿದ್ದಾರೆ.ಇತಿಹಾಸ ಶಾಸನಗಳ ಜೊತೆಗೆ ಬಸವವಾಗ್ಮಿಯವನ್ನು ಕುರಿತು ವಿವಿದ ಭಾಷೆಗಳಲ್ಲಿ ಉಪಲಬ್ದವಿದ್ದ ತತ್ಕಾಲೀನ ಸಮಗ್ರ ಸಾಹಿತ್ಯ ವನ್ನು, ಬಸವೇಶ್ವರ ಮತ್ತು ಅವನ ಸಮಕಾಲೀನ ಶರಣರ ವಚನಗಳನ್ನು ಗಂಬೀರ ಅದ್ಯಯನಕ್ಕೆ ಒಳಪಡಿಸಿ ಚಿತ್ರಿಸಿದ ವಿನೂತನ ಬಗೆಯ ಬಸವಚರಿತ್ರೆ ಇದು. ಪ್ರಖರ ಬುದ್ದಿಮತ್ತೆಯ ,ಕ್ರಾಂತಿಕಾರಕ ವಿಚಾರಗಳ,ನಡೆ ನುಡಿಗಳನ್ನು ಅಬಿನ್ನಗೊಳಿಸಿದ ಕಾಯಕಜೀವಿ,ನ್ಯಾಯನಿಷ್ಟುರಿ ,ವಿನೂತನ ಮಾನವದರ್ಮ ಪ್ರತಿಪಾದಕ,ಅನುಬಾವಿ,ಸಂತ ಬಸವಣ್ಣನ ಜನನ ಕಾಲದಿಂರ ಅವನ ಶಿವೈಕ್ಯದ ವರೆಗೆ ಅಪೂರ್ವ ದಾಖಲೆಗಳು ಇಲ್ಲಿವೆ.
©2024 Book Brahma Private Limited.