ಇದು ವಿವಿಧ ಲೇಖಕರು ಬರೆದ ಆತ್ಮಚರಿತ್ರೆಗಳಲ್ಲಿಯ ಅಮ್ಮನ ಕುರಿತಾದ ಆಯ್ದ ಭಾಗಗಳ ಸಂಕಲನ.ಇದು ವೈವಿಧ್ಯಮಯವಾದ ಲೇಖನಗಳಿಂದ ಕೂಡಿದ್ದು, ಇಲ್ಲಿ ಜಗತ್ತಿಗೆ ಬೆಳಕು ತೋರುವ ಯೋಗಿಗಳು, ತತ್ವಜ್ಞಾನಿಗಳು, ವಿಜ್ಞಾನಿಗಳು, ವೈದ್ಯರು, ಸ್ವಾತಂತ್ರ್ಯ ಹೋರಾಟಗಾರರು, ಭಾರತೀಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ಮೇಲ್ವರ್ಗದವರ ತುಳಿತಕ್ಕೆ ಒಳಗಾದ ಜನಸಾಮಾನ್ಯರು, ಆಢಳಿತಗಾರರು, ಅಧಿಕಾರಿಗಳು ಹೀಗೆ ಹಲವರು ತಮ್ಮ ಆತ್ಮಕಥೆಗಳಲ್ಲಿ ಅಮ್ಮನ ಕುರಿತಾಗಿ ಬರೆದ ಲೇಖನಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. ಇಲ್ಲಿ ಜಗತ್ತನ್ನೇ ನಡುಗಿಸಿದ ಹಿಟ್ಲರ್ ಕೂಡ ತಾಯಿಯನ್ನು ಸ್ಮರಿಸುವ ಲೇಖನಗಳ ಜೊತೆಗೆ ಅದೇ ಹಿಟ್ಲರಿನಿಂದ ತನ್ನ ತಾಯಿಯೊಂದಿಗೆ ದಾರುಣ ನೋವನ್ನನುಭವಿಸಿದ ಬೆಟ್ಟಿ ಎನ್ನುವ ಹೆಣ್ಣುಮಗಳು ತನ್ನ ಅಮ್ಮನ ಕುರಿತಾಗಿ ಬರೆದ ಲೇಖನವು ಇದೆ.
©2024 Book Brahma Private Limited.