ತೆಲುಗು ಸಾಹಿತ್ಯದ ವಿಶ್ವನಾಥ ಸತ್ಯನಾರಾಯಣ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಸಮಕಾಲೀನ ಭಾರತೀಯ ಲೇಖಕರ ಸಾಲಿನಲ್ಲಿ ಬಹಳ ಗೌರವಯುತವಾದ ಹೆಸರನ್ನು ಪಡೆದುಕೊಂಡಿದ್ದಾರೆ. ಅವರ ’ಅನಾಥ ಪಕ್ಷಿ’ ಕಾದಂಬರಿಯನ್ನು ಕನ್ನಡಕ್ಕೆ ವೀರಭದ್ರ ಅನುವಾದಿಸಿದ್ದಾರೆ.
ಹುಟ್ಟುವಾಗಲೇ ಅನಾಥನಾದ ವ್ಯಕ್ತಿಯೊಬ್ಬನ ಕಥೆ ಇದು. ಚಿಕ್ಕಮ್ಮನ ಮನೆಯ ಕಷ್ಟದ ವಾತಾವರಣದಲ್ಲಿ ಬೆಳೆದು, ಅಲ್ಲಿಂದ ಮನೆಬಿಟ್ಟು ಬೇರೆಮನೆ ಸೇರಿ, ಅಲ್ಲಿ ದನಕಾಯ್ದು ಕೊಂಡು, ಅದೃಷ್ಟವಶಾತ್ ಓದು ಬರಹವನ್ನು ಕಲಿತು ನಂತರ ಜೀವನದ ಹಲವು ತಿರುವುಗಳಲ್ಲಿ ನಡೆಯುವುದು ಕೃತಿಯ ಪ್ರಮುಖ ಕಥಾವಸ್ತು.
©2024 Book Brahma Private Limited.