ಡಾ. ಎಂ.ಎಂ.ಕಲಬುರ್ಗಿಯವರ ಮರಣಾನಂತರ ಅವರ 79ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಪತ್ನಿ ಉಮಾದೇವಿ ಕಲಬುರ್ಗಿ ಅವರು ಈ ಸಂಪುಟ ಪ್ರಕಾಶನಗೊಳ್ಳುವಂತೆ ಆಸಕ್ತಿವಹಿಸಿದರು. ಮಾರ್ಗ ಸಂಪುಟ ಸರಣಿಯ ಎಂಟನೆಯ ಸಂಪುಟ ಇದು. ಇದರಲ್ಲಿ 114 ಲೇಖನಗಳು ಸೇರಿವೆ. ಈ ಲೇಖನಗಳನ್ನು ವಿಷಯಾನುಸಾರ ಆತ್ಮಕಥೆ, ಪ್ರಬಂಧ, ಭಾಷಣ, ವ್ಯಕ್ತಿಚಿತ್ರ, ಮುನ್ನುಡಿ, ಬೆನ್ನುಡಿ, ಅರಿಕೆ, ಇತರ ಎಂದು 8 ವಿಭಾಗಗಳಲ್ಲಿ ವಿಂಗಡಿಸಲಾಗಿದೆ.
ಮೊದಲಭಾಗ ಕಲಬುರ್ಗಿಯವರ ಜೀವನ, ಪರಿಸರ, ಸಾಹಿತ್ಯಿಕ, ಸಾಮಾಜಿಕ ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಸಂಗತಿಗಳನ್ನು ನಿರೂಪಿಸುವ 20 ಪುಟಗಳ 'ನನ್ನ ಬದುಕು' ಆತ್ಮಕಥೆಯನ್ನು ಒಳಗೊಂಡಿದೆ. ನಂತರದ ಏಳು ಭಾಗಗಳು ಕ್ರಮವಾಗಿ ಸಂಶೋಧನೆ, ಛಂದಸ್ಸು, ಭಾಷೆ, ಧರ್ಮ, ಪ್ರತಿಕ್ರಿಯೆ, ಸಮಾಜ, ಸಂಶೋಧನೆಯ ಸ್ವರೂಪ, ಬಸವಣ್ಣನವರ ನಿಜ ಚರಿತ್ರೆ, ಲಾವಣಿ, ಸಮ್ಮೇಳನ, ವಿಚಾರ ಸಂಕಿರಣ, ಗ್ರಂಥ ಬಿಡುಗಡೆ, ಅಧ್ಯಕ್ಷೀಯ ಭಾಷಣ, ಉದ್ಘಾಟನಾ ಭಾಷಣ, ವ್ಯಕ್ತಿಚಿತ್ರ, ಬೇರೆಯವರ ಕೃತಿಗಳಿಗೆ ಬರೆದ ಮುನ್ನುಡಿ, ಬೆನ್ನುಡಿ, ತಮ್ಮ ಕೃತಿಗಳಿಗೆ ಬರೆದ ಅರಿಕೆ, ಸಂಪಾದಕೀಯ, ಸಾಂಧರ್ಭಿಕ ಬರಹಗಳು ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಬರಹಗಳಿವೆ.
©2024 Book Brahma Private Limited.