ಲಕ್ಷೀಶನ ಜೈಮಿನಿ ಭಾರತ

Author : ಬಿ.ಎಸ್. ಸಣ್ಣಯ್ಯ

Pages 414

₹ 210.00




Year of Publication: 2011
Published by: ಕುವೆಂಪು ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ

Synopsys

‘ಲಕ್ಷೀಶನ ಜೈಮಿನಿ ಭಾರತ’ ಕನ್ನಡ‌ ಸಾಹಿತ್ಯದ ಕಾವ್ಯಪ್ರಪಂಚದಲ್ಲಿ ಬಹುಜನಪ್ರಿಯತೆಯನ್ನು ಗಳಿಸಿರುವ ಷಟ್ಟದೀ ಕಾವ್ಯ. ಲಾಲಿತ್ಯ ಮತ್ತು ಮಾಧುರ್ಯದಿಂದ ಸಾಮಾನ್ಯ ಜನತೆಯನ್ನೂ ಆಕರ್ಷಿಸಿ ಹಳ್ಳಿಹಳ್ಳಿಗಳಲ್ಲಿ ವಾಚನ ಮಾಡಿಸಿಕೊಂಡಿರುವ ಅಪೂರ್ವ ಕಾವ್ಯವಾದ ಲಕ್ಷ್ಮೀಶನ ಈ ಜೈಮಿನಿ ಭಾರತ ಕೃತಿಯನ್ನು ಲೇಖಕರಾದ ಬಿ.ಎಸ್. ಸಣ್ಣಯ್ಯ ಹಾಗೂ ಡಾ. ರಾಮೇಗೌಡ ಅವರು ಅರ್ಥಕೋಶ, ಕಥಾಸಾರಗಳ ಮೂಲಕ ಸರಳ ಭಾಷೆಯಲ್ಲಿ ವಿಶ್ಲೇಷಿಸಿದ್ದಾರೆ. ಈ ಕೃತಿಯಲ್ಲಿ ಜೈಮಿನಿ ಭಾರತ, ಅನುಬಂಧಗಳು, ಹೆಚ್ಚಿನ ಪದ್ಯಗಳು, ಕಥಾಸಾರ ಹಾಗೂ ಅರ್ಥಕೋಶ ಎಂಬ ವಿಭಾಗಗಳಲ್ಲಿ ಮಹಾಕಾವ್ಯವನ್ನು ವಿಶ್ಲೇಷಿಸಿದ್ದಾರೆ.

About the Author

ಬಿ.ಎಸ್. ಸಣ್ಣಯ್ಯ
(26 June 1928 - 12 May 2021)

ಲೇಖಕ, ಸಂಶೋಧಕ ಬಿ.ಎಸ್. ಸಣ್ಣಯ್ಯ ಅವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ ತಾಲ್ಲೂಕಿನ ಭೋಗನಹಳ್ಳಿಯಲ್ಲಿ. 1928ರ ಜೂನ್ 18 ರಂದು ಜನನ. ತಂದೆ ಸಣ್ಣೇಗೌಡ, ತಾಯಿ- ಬೋರಮ್ಮ. ಪ್ರಾರಂಭಿಕ ಶಿಕ್ಷಣ ರಾವಂದೂರಿನಲ್ಲಿ , ಪ್ರೌಢಶಾಲಾ ಶಿಕ್ಷಣವನ್ನು ಕೃಷ್ಣರಾಜನಗರದಲ್ಲಿ ಪೂರ್ಣಗೊಳಿಸಿದರು. ಮೈಸೂರು ವಿವಿಯಿಂದ ಬಿ.ಎ. ಆನರ್ಸ್, ಎಂ.ಎ, ಬಿ.ಲಿಬ್ ಪದವಿಗಳ ಜೊತೆಗೆ , ಡಿಪ್ಲೊಮಾ ಇನ್ ಅರ್ಕೈವ್ಸ್ ಮೈಸೂರು ವಿವಿಯಿಂದ ಪ್ರಾಚ್ಯ ಸಂಶೋಧನಾಲಯದಲ್ಲಿ ವೃತ್ತಿ ( 1956) ಆರಂಭಿಸಿದರು.ಕನ್ನಡ ಅಧ್ಯಯನ ಸಂಸ್ಥೆಯ ಗ್ರಂಥ ಸಂಪಾದನಾ ವಿಭಾಗದ ನಿರ್ದೇಶಕರಾಗಿ ನಿವೃತ್ತರಾದರು.  ಶ್ರವಣಬೆಳಗೊಳದ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯಲ್ಲಿ ಮುಖ್ಯಸ್ಥರಾಗಿ ನೇಮಿಚಂದ್ರ ...

READ MORE

Related Books