ಹನ್ನೆರಡನೇ ಶತಮಾನದ ಕಾಯಕಜೀವಿಗಳ ಚಳವಳಿ

Author : ಸಿ. ವೀರಣ್ಣ

Pages 48

₹ 25.00




Year of Publication: 2018
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್‌, ಕ್ರೆಸೆಂಟ್ ರಸ್ತೆ, ಬೆಂಗಳೂರು-560001
Phone: 22161901

Synopsys

ಹನ್ನೆರಡನೇ  ಶತಮಾನ ಕರ್ನಾಟಕದ ಇತಿಹಾಸದಲ್ಲೊಂದು ಪರ್ವ ಕಾಲವಾಗಿತ್ತು. ಮತೀಯ ಸಂಸ್ಥೆಗಳು ರಾಜರಜೊತೆ ಸೇರಿಕೊಂಡರೆ, ರಾಜರೊಡೆನೆ ಅನೋನ್ಯವಾಗಿದ್ದ ವರ್ತಕ ಮಂಡಲಿಗಲು ಶ್ರಮ ಜೀವಿಗಳ ಸುಲಿಗೆಯನ್ನು ತಮ್ಮ ಬಂಡವಾಳವಾಗಿ ಮಾಡಿಕೊಂಡಿದ್ದರು ಎಂಬುದಕ್ಕೆ ಈ ಕೃತಿಯಲ್ಲಿ ಸಾಕ್ಷಿ ಸಮೇತ ವಿವರಣೆಗಳನ್ನು ಒದಗಿಸಲಾಗಿದೆ. ಸಾಮಾನ್ಯ ಜನರ ಮೇಲೆ ವಿಧಿಸಿದ್ದ ತೆರಿಗೆಗಳು ಅವರು ಹೊರಲಾರದಷ್ಟು ಭಾರವಾಗಿತ್ತು. ಸಹಿಸಲು ಅಸಾಧ್ಯವಾದ ಅನ್ಯಾಯ ಅಪಮಾನಗಳನ್ನು ಹೊರಿಸುತ್ತಿದ್ದವು. ಅವುಗಳ ವಿರುದ್ಧ ಕಾಯಕ ಜೀವಿಗಳು ಹೂಡಿದ್ದ ಬಂಡಾಯದ ಸಾಹಿತ್ಯಕ ಅಭಿವ್ಯಕ್ತಿಯನ್ನು ಅಂದಿನ ವಚನ ಸಾಹಿತ್ಯದಲ್ಲಿ ಕಾಣಬಹುದು. ವೃತ್ತಿ ಜೀವಿಗಳ ಶೋಷಣೆಯ ವಿರುದ್ಧ ಹೊರಟು ಧಾರ್ಮಿಕ ನೈತಿಕ ನೆಲೆಗಟ್ಟಿನಲ್ಲಿಯೇ ನಿಂತ ಚಳುವಳಿ, ಏನನ್ನೂ ಬದಲಾಯಿಸಲಾರದೇ ತಾನೇ ಒಂದು ಜಾತಿ ಅಥವಾ ಧರ್ಮ ಪಂಥದ ರೂಪವನ್ನು ತಾಳಿತು. ಈ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಗಳನ್ನು ನೀಡಿದ್ದಾರೆ.

About the Author

ಸಿ. ವೀರಣ್ಣ

ಡಾ. ಸಿ. ವೀರಣ್ಣಅವರು ಸಂಶೋಧಕ, ಸಾಮಾಜಿಕ ಚಿಂತಕ. 1942 ಜೂನ್ 15ರಂದು ಜನನ. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಎಂ.ಎ ಪದವಿಯನ್ನು ಪಡೆದಿರುವ ಅವರು ಐಚ್ಛಿಕ ಕನ್ನಡದಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ(1967) ಅತಿಹೆಚ್ಚು ಅಂಕಗಳಿಸಿ ”ಪ್ರೊ.ಎ.ಆರ್.ಕೃಷ್ಣಶಾಸ್ತ್ರೀ ಸ್ಮಾರಕ ಸುವರ್ಣ ಪದಕವನ್ನು ಪಡೆದಿರುತ್ತಾರೆ. ಹಂಪಾ ನಾಗರಜಯ್ಯ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಕಾವ್ಯ ಕಂಡ ಹೆಣ್ಣು’ ಪ್ರಬಂಧ ಮಂಡಿಸಿ ಪಿ.ಎಚ್.ಡಿ ಪದವಿಯನ್ನು ಪಡೆದಿರುತ್ತಾರೆ. ತಮ್ಮ ಅಧ್ಯಾಪಕ ವೃತ್ತಿ ಜೀವನವನ್ನು ಆಚಾರ್ಯ ಪದವಿ ಕಾಲೇಜಿನಲ್ಲಿಆರಂಭಿಸಿದ ಅವರು, ಎರಡು ವರ್ಷಗಳ ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ 'ಡಾ.ಜಿ.ಎಸ್.ಶಿವರುದ್ರಪ್ಪ ಅವರ ಕನ್ನಡ ಅಧ್ಯಯನ ಕೇಂದ್ರ'ದಲ್ಲಿ ಸಂಶೋಧನಾ ಸಹಾಯಕರಾಗಿ ...

READ MORE

Related Books