ಧ್ಯಾನಸಿದ್ಧ: ಸ್ವಾಮಿ ವಿವೇಕಾನಂದರ ಸಾಧನೆ, ಪ್ರಸಿದ್ಧಿ ಮತ್ತು ಸಿದ್ಧಿ

Author : ಟಿ.ಎನ್. ವಾಸುದೇವ ಮೂರ್ತಿ

Pages 120

₹ 99.00




Year of Publication: 2017
Published by: ವಂಶಿ ಪಬ್ಲಿಕೇಷನ್ಸ್
Address: ಮಳಿಗೆ ಸಂಖ್ಯೆ 4, ಬಿಎಚ್.ರಸ್ತೆ. ಟಿ.ಬಿ. ಬಸ್ ನಿಲ್ದಾಣ ಬಳಿ, ನೆಲಮಂಗಲ-562123, (ಬೆಂಗಳೂರು ಗ್ರಾಮೀಣ)
Phone: 09916595916

Synopsys

ಆಚಾರ್ಯ ಓಶೋ ಅವರ ಕೃತಿ-ಧ್ಯಾನಸಿದ್ಧ: ವಿವೇಕಾನಂದರ ಸಾಧನೆ, ಪ್ರಸಿದ್ಧಿ ಮತ್ತು ಸಿದ್ದಿ. ಲೇಖನ ಡಾ. ಟಿ.ಎನ್. ವಾಸುದೇವ ಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೀ ವಿವೇಕಾನಂದರು ಭಾರತೀಯ ಸಂಸ್ಕೃತಿಯನ್ನು ಚೆನ್ನಾಗಿ ಬಲ್ಲವರು. ವಿಶ್ವಕೊಡುಗೆಯಾಗಿ ಭಾರತೀಯ ಸಂಸ್ಕೃತಿಗೆ ಎಲ್ಲ ಅರ್ಹತೆಯೂ ಇದೆ ಎಂದು ಪ್ರತಿಪಾದಿಸಿದವರು. ಅವರ ಸಾಧನೆ, ಪ್ರಸಿದ್ಧಿ ಹಾಗೂ ಸಿದ್ಧಿ ಕುರಿತು ಓಶೋ ಅವರ ವಿಚಾರಗಳನ್ನು ಈ ಕೃತಿಯಲ್ಲಿ ಒಳಗೊಂಡಿದ್ದು, ಮೂಲ ಭಾವನೆಗಳಿಗೆ ಧಕ್ಕೆಯಾಗದ ಹಾಗೆ ಲೇಖಕರು ಅನುವಾದಿಸಿದ್ದಾರೆ.

About the Author

ಟಿ.ಎನ್. ವಾಸುದೇವ ಮೂರ್ತಿ
(30 December 1974)

ಟಿ.ಎನ್.ವಾಸುದೇವ ಮೂರ್ತಿ ಅವರು ಕಿ.ರಂ.ನಾಗರಾಜ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಅಲ್ಲಮ ಪ್ರಭುವಿನ ವಚನಗಳ ದಾರ್ಶನಿಕ ಮರುಚಿಂತನೆಯ ವಿಭಿನ್ನ ಸ್ವರೂಪಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಶಸ್ತಿ ಸಂದಿದೆ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು ಪಡೆದ ಮೇಲೆ ಬೆಂಗಳೂರಿನ ಹಲವು ಪ್ರಮುಖ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನ್ಯಾಷನಲ್  ಕಾಲೇಜು, ಜೈನ್ ವಿಶ್ವವಿದ್ಯಾಲಯ ಕಾವ್ಯಮಂಡಲ ಮೊದಲಾದ ಕನ್ನಡ ಸ್ನಾತಕೋತ್ತರ ಕೇಂದ್ರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಎಂ.ಎ. ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ...

READ MORE

Related Books