ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವ

Author : ಅನಸೂಯ ಕಾಂಬಳೆ

Pages 265

₹ 120.00




Year of Publication: 2011
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560067
Phone: 080-22107769

Synopsys

ಯಾವುದೇ ಸಾಹಿತ್ಯದ ಮೇಲೆ ಸಮಕಾಲೀನ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪ್ರಭಾವ ಬೀರುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಸಂವಿಧಾನ ಶಿಲ್ಪಿ , ಅತ್ಯದ್ಭುತ ಮಾನವತಾವಾದಿ ಅಂಬೇಡ್ಕರ್ ವಿಚಾರದಲ್ಲೂ ಈ ಮಾತು ಮತ್ತೊಮ್ಮೆ ಸಾಬೀತಾಗಿದೆ. ಶೋಷಿತ, ದಮನಿತ ಸಮುದಾಯಗಳ ಏಳಿಗೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಅಂಬೇಡ್ಕರ್ ಚಿಂತನೆ ದೇಶವನ್ನೇ ಪ್ರಭಾವಿಸಿಕೊಂಡಿದೆ. ಇದಕ್ಕೆ ಕನ್ನಡ ಸಾಹಿತ್ಯ ಹೊರತಾದುದಲ್ಲ, ಯಾಕೆಂದರೆ ಕನ್ನಡ ಸಾಹಿತ್ಯದ ಮೇಲೂ ಅಂಬೇಡ್ಕರ್‌ ಪ್ರಭಾವ ಬೀರಿದೆ. ಕವಿಯತ್ರಿ ಡಾ. ಅನಸೂಯ ಕ. ಕಾಂಬಳೆ ಯವರು ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಬೀರಿದ ಪ್ರಭಾವವನ್ನು ಕೃತಿಯಲ್ಲಿ ದಾಖಲು ಮಾಡಿದ್ದಾರೆ.

About the Author

ಅನಸೂಯ ಕಾಂಬಳೆ
(28 December 1970)

ಅನಸೂಯ ಕಾಂಬಳೆ ಅವರು ದಲಿತ ಮಹಿಳಾ ಸಂವೇದನೆಯ ಕನ್ನಡದ ಮುಖ್ಯ ಬರಹಗಾರ್ತಿಯರಲ್ಲಿ ಒಬ್ಬರು. 1970ರ ಡಿಸೆಂಬರ್ 28 ರಂದು ಜನಿಸಿದ ಅನಸೂಯ ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಮಲಾಪೂರ ಗ್ರಾಮದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದ ಮೇಲೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.’ಬರಗೂರರ ಕಾದಂಬರಿಗಳು : ಒಂದು ಅಧ್ಯಯ’ ಎಂಬ ಪ್ರಬಂಧ ಸಲ್ಲಿಸಿ ಎಂ.ಫಿಲ್ ಪದವಿ ಮತ್ತು ’ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವ' ಎಂಬ ಕಾವ್ಯವನ್ನು ಅನುಲಕ್ಷಿಸಿ ಸಲ್ಲಿಸಿದ ಪ್ರಬಂಧಕ್ಕೆ ಪಿಎಚ್. ಡಿ. ಪದವಿ ಪಡೆದಿದ್ದಾರೆ ಮುಳ್ಳು ಕಂಟಿಯ ನಡುವೆ (ಕವನ ಸಂಕಲನ), ...

READ MORE

Related Books