ಹಿಂದೂಗಳ ಪಾಲಿನ ಧರ್ಮಗ್ರಂಥವೆಂದೇ ಕರೆಸಿಕೊಳ್ಳುವ ಮಹಾಕಾವ್ಯ ರಾಮಾಯಣ. ಈ ರಾಮಾಯಣವನ್ನು ಹಲವರು ಹಲವು ಬಗೆಯಲ್ಲಿ ಕಂಡಿದ್ದಾರೆ, ಕಟ್ಟಿಕೊಟ್ಟಿದ್ದಾರೆ. ಆದರೆ ರಾಮಾಯಣ ಎಂದಿಗೂ ಹೊಸತೇ ಎಂಬಂತೆ ಕಾಲದ ಪರಿದಿಯನ್ನು ಮೀರಿ ಬೆಳೆಯುತ್ತಲೇ ಇದೆ. ಆ ಮಹಾಕಾವ್ಯದ ವಿಶೇಷ ಭಾಗಗಳನ್ನು ಈ ಕೃತಿಯಲ್ಲಿ ಪಂಡಿತರಿಂದ ಪಾಮರರ ವರೆಗೂ ಅರ್ಥವಾಗುವ ರೀತಿಯಲ್ಲಿ ಹಿರಿಯ ಲೇಖಕ ನಾಗರಾಜರಾವ್ ಎಂ.ವಿ ಅವರು ಬರೆದಿದ್ದಾರೆ. ಶ್ರೀರಾಮನ ಪಟ್ಟಾಭಿಷೇಕ ಸೇರಿದಂತೆ ಹಲವು ಭಾಗಗಳನ್ನು ಸರಳ ಭಾಷೆಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.