ಮೈಸೂರು ವಿಶ್ವವಿದ್ಯಾಲಯದ ಓರಿಯೆಂಟಲ್ ಲೈಬ್ರರಿ ಪಬ್ಲಿಕೇಷನ್ಸ್ ಪ್ರಾಚ್ಯಕೋಶಾಗಾರವು ರಚಿಸಿದ ತಜ್ಞರ ಮಂಡಳಿಯ ಪರಿಶೀಲನೆ ಅನ್ವಯ ಕರ್ನಾಟಕದ ಮಹಾಭಾರತದ ವಿವಿಧ ಪರ್ವಗಳ ಸಂಪುಟಗಳನ್ನು ಪ್ರಕಟಿಸಲಾಯಿತು. ಪ್ರಧಾನ ಸಂಪಾದಕರಾಗಿ ಎಂ.ಎಸ್. ಬಸವಲಿಂಗಯ್ಯ ಹಾಗೂ ಸಂಪಾದಕರಾಗಿ ಎನ್. ಅನಂತ ರಂಗಾಚಾರ್ ಇದ್ದು, ಆ ಪೈಕಿ ಪ್ರಸ್ತುತ ಕೃತಿಯು ಕುಮಾರ ವ್ಯಾಸ ವಿರಚಿತ ಕರ್ನಾಟಕ ಮಹಾಭಾರತದ ಕರ್ಣ ಪರ್ವ, ಸಂಪುಟ-9' ಆಗಿದೆ. ಕರ್ಣನ ಸೇನೆ ಅಧಿಪತ್ಯಾಭಿಷೇಕ, ಸಾತ್ಯಕಿಯ ಯುದ್ಧ, ತ್ರಿಪುರ ದಹನದ ಕಥೆ, ಕರ್ಣ-ಶಲ್ಯರ ಒಳಜಗಳ, ಭೀಮನ ಘೋರ ಯುದ್ಧ, ದುಶ್ಯಾಸನನ ವಧೆ, ವೃಷಸೇನನ ಮರಣ, ಕರ್ಣ ಅರ್ಜುನರ ಯುದ್ಧ ರಂಗ ಪ್ರವೇಶ, ಕರ್ಣನ ವಧೆ, ಕರ್ಣನ ಸಾವಿಗಾಗಿ ದುರ್ಯೋಧನನ ಪ್ರಲಾಪ ಇತ್ಯಾದಿ ಅಧ್ಯಾಯಗಳು ಈ ಕೃತಿಯಲ್ಲಿ ಸೇರಿವೆ.
©2024 Book Brahma Private Limited.