`ದ್ರೌಪದಿ' ಮಹಾಕಾವ್ಮವಾದ ಮಹಾಭಾರತದ ಒಂದು ಪಾತ್ರ . ಈ ಪಾತ್ರದ ಪರಿಚಯವನ್ನು ಲೇಖಕಿ ಪದ್ಮಾ ಶೆಣೈ ಮಾಡಿಕೊಟ್ಟಿದ್ದಾರೆ. ಪಂಚ ಮಹಾ ಪತಿವ್ರತೆಯರಲ್ಲಿ ಒಬ್ಬಳಾದ ಶೂರ ರಾಜಕುಮಾರಿ. ಹಿಡಿದ ಹಟ ಬಿಡದ ಛಲವಾದಿನಿ, ಶ್ರೀಕೃಷ್ಣನ ಪರಮಭಕ್ತೆ-ಸಿಡಿಲಿನಂತಹ ವ್ಯಕ್ತಿತ್ವವಾದರೂ ಮಮತಾಮೂರ್ತಿ ಎಂದು ದ್ರೌಪದಿಯನ್ನು ವರ್ಣಿಸಲಾಗಿದೆ. ಬದುಕಿನಲ್ಲಿ ತಾನು ಮಾಡದ ತಪ್ಪಿಗೆ ಆಕೆ ಅನುಭವಿಸಿದ ಕಷ್ಟಗಳು, ಪಾಂಡವರೊಂದಿಗಿನ ಆಕೆಯ ಬದುಕು, ಸ್ರೀ ಹೇಗಿರಬೇಕೆಂಬ ಆಕೆಯ ಬದುಕು ಇದೆಲ್ಲವನ್ನೂ ಈ ಪುಸ್ತಕದಲ್ಲಿ ಲೇಖಕಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಕೃತಿಯಲ್ಲಿ ದ್ರೌಪದಿಯ ಬದುಕು ಈಗಿನ ಸಮಾಜಕ್ಕೆ ಯಾವ ರೀತಿಯಾದಂತಹ ಸಂದೇಶ ಕೊಡಬಲ್ಲದು ಎಂಬುದನ್ನು ಇಲ್ಲಿ ಚಿತ್ರಿಸಲಾಗಿದೆ.
©2024 Book Brahma Private Limited.