ಮೈಸೂರು ವಿಶ್ವವಿದ್ಯಾಲಯದ ಓರಿಯೆಂಟಲ್ ಲೈಬ್ರರಿ ಪಬ್ಲಿಕೇಷನ್ಸ್ ಪ್ರಾಚ್ಯಕೋಶಾಗಾರವು ರಚಿಸಿದ ತಜ್ಞರ ಮಂಡಳಿಯ ಪರಿಶೀಲನೆ ಅನ್ವಯ ಕರ್ನಾಟಕದ ಮಹಾಭಾರತದ ವಿವಿಧ ಪರ್ವಗಳ ಸಂಪುಟಗಳನ್ನು ಪ್ರಕಟಿಸಲಾಯಿತು. ಪ್ರಧಾನ ಸಂಪಾದಕರಾಗಿ ಎಂ.ಎಸ್. ಬಸವಲಿಂಗಯ್ಯ ಹಾಗೂ ಸಂಪಾದಕರಾಗಿ ಎನ್. ಅನಂತ ರಂಗಾಚಾರ್ ಇದ್ದು, ಆ ಪೈಕಿ ಪ್ರಸ್ತುತ ಕೃತಿಯು ಕುಮಾರ ವ್ಯಾಸ ವಿರಚಿತ ಕರ್ನಾಟಕ ಮಹಾಭಾರತದ ಶಲ್ಯ ಗದಾ ಪರ್ವ, ಸಂಪುಟ-10' ಆಗಿದೆ.
ಶಲ್ಯನ ಸೇನಾಧಿಪತ್ಯಾಭಿಷೇಕ, ಧರ್ಮರಾಯನು ಶಲ್ಯನನ್ನು ಗೆಲ್ಲುವುದು, ಶಲ್ಯ ವಧೆ, ಧುರ್ಯೋಧನನು ಸೈನ್ಯಾಧಿಪತ್ಯವನ್ನು ವಹಿಸುವುದು, ಶಕುನಿ ಮರಣ, ಕೌರವನು ದ್ವೈಪಾಯನ ಸರೋವರವನ್ನು ಹೊಕ್ಕುವುದು, ಧುರ್ಯೋಧನನ್ನು ಹುಡುಕುತ್ತಾ ಪಾಂಡವರು ಸರೋವರವನ್ನು ಮುತ್ತುವುದು, ಭೀಮ-ಧುರ್ಯೋಧನರ ಸಂಗ್ರಾಮ, ಧುರ್ಯೋಧನರ ಮರಣ, ಅಶ್ವತ್ಥಾಮನ ಪಾಂಡವರ ವ್ಯೂಹವನ್ನು ಕೊಲ್ಲುವುದು, ಅಶ್ವತ್ಥಾಮನ ಶರಕ್ಕೆ ತುತ್ತಾದ ಉತ್ತರೆಯ ಗರ್ಭವನ್ನು ಶ್ರೀಕೃಷ್ಣನು ಕಾಪಾಡುವುದು, ಗಾಂಧಾರಿಯು ಧರ್ಮರಾಜನಿಗೆ ಶಾಪ ಕೊಡುವುದು, ರಂಣರಂಗದಲ್ಲಿ ನೂರು ಮಕ್ಕಳ ಹೆಣಗಳನ್ನು ಕಂಡ ಗಾಂಧಾರಿಯ ಪ್ರಲಾಪ, ಧರ್ಮರಾಜನ ಪಟ್ಟಾಭಿಷೇಕ ಹೀಗೆ ವಿವಿಧ ಅಧ್ಯಾಯಗಳಡಿ ಇಡೀ ಶಲ್ಯ ಹಾಗೂ ಗದಾ ಪರ್ವದ ಸಂಪೂರ್ಣ ವಿವರವನ್ನು ನೀಡಲಾಗಿದೆ.
©2024 Book Brahma Private Limited.