ಲೇಖಕ ಅಮೀಶ್ ತ್ರಿಪಾಠಿ ಅವರು ರಾಮಚಂದ್ರ ಸರಣಿ-1ರ ಅಡಿ ಬರೆದ ಕೃತಿ-ಇಕ್ಷ್ವಾಕು ಕುಲತಿಲಕ. ಇಂಗ್ಲಿಷಿನಲ್ಲಿ (Scion of Ikshvaku) ಬರೆದ ಕೃತಿಯನ್ನು ಲೇಖಕ ಎಸ್. ಉಮೇಶ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತೀಯ ಸನಾತನ ಧರ್ಮ, ಪುರಾಣ, ಮಹಾಕಾವ್ಯಗಳು ಓದುಗರಿಂದ ಮರೆಯಾಗಬಾರದು ಎಂಬ ಸದುದ್ದೇಶದೊಂದಿಗೆ ಲೇಖಕರು ಧಾರ್ಮಿಕ ಚಿಂತನೆಯ ಇಂತಹ ಕೃತಿಗಳನ್ನು ರಚಿಸುತ್ತಲೇ ಇದ್ದಾರೆ. ಮೂರು ಕೃತಿಗಳ ‘ಶಿವ ಸರಣಿ’(ಶಿವಾಸ್ ಟ್ರಯಾಲಜಿ)ಯಿಂದ ಪ್ರಸಿದ್ಧರಾದ ಲೇಖಕರು ಈಗ ರಾಮಚಂದ್ರ ಎಂಬ ಸರಣಿ ಆರಂಭಿಸಿ, ಅದರ 1ನೇ ಭಾಗವಾಗಿ ಈ ಕೃತಿ ಪ್ರಕಟಗೊಂಡಿದೆ. ಇಕ್ಷ್ವಾಕು ವಂಶದ ಕುಡಿಯನ್ನು ಲೇಕಕರು ವಿಭಿನ್ನ ದೃಷ್ಟಿಕೋನದಿಂದ ಚಿತ್ರಿಸಿದ್ದು, ಮೂಲ ಭಾವಕ್ಕೂ ಧಕ್ಕೆಯಾಗದಂತೆ ಎಚ್ಚರವಹಿಸಿದ್ದು, ಓದುಗರನ್ನು ಸೆಳೆಯುತ್ತದೆ.
©2024 Book Brahma Private Limited.