`ಯುಧಿಷ್ಠಿರ' ಮಹಾಭಾರತದ ಪ್ರಮುಖ ಪಾತ್ರದ ಜೀವನ ಕಥೆಯ ಕೃತಿ ಇದು. ಲೇಖಕ ಎಂ.ವಿ. ಸೀತಾರಾಮಯ್ಯ ಅವರು ರಚಿಸಿದ್ದಾರೆ. ಅನೇಕ ಒತ್ತಡಗಳ ನಡುವೆಯೂ ಧರ್ಮಧ್ವಜವನ್ನು ಎತ್ತಿ ಹಿಡಿದು, ಸದಾಚಾರಗಳ ಸಾಕಾರ ಮೂರ್ತಿ ಎನಿಸಿಕೊಂಡಿರುವ ಮಹಾಭಾರತದ ಅಸಾಮಾನ್ಯ ವ್ಯಕ್ತಿತ್ವ. ಧರ್ಮಕ್ಕಾಗಿ ಎಲ್ಲವನ್ನೂ ತ್ಯಜಿಸಿದ ತ್ಯಾಗಮಯಿ ಧರ್ಮರಾಯ. ತನ್ನ ಧರ್ಮದ ಬಗೆಗೆ ಅಪಾರ ನಿಷ್ಟೆಯಲ್ಲಿ ಬದುಕಿದ ವ್ಯಕ್ತಿತ್ವ ಯುಧಿಷ್ಠಿರ. ತನ್ನ ಕೊನೆಯ ಕಾಲದಲ್ಲೂ ಧರ್ಮವೇ ದೊಡ್ಡದು ಎಂಬುದನ್ನು ತೋರಿಸಿಕೊಟ್ಟ ಮಹನೀಯ ...ಹೀಗೆ ಯುಧಿಷ್ಠರ ಪಾತ್ರದ ವಿಶ್ಲೇಷಣೆಯನ್ನು ಈ ಕೃತಿ ಒಳಗೊಂಡಿದೆ.
©2025 Book Brahma Private Limited.