ಇದು ಭಾರವಿ ಮಹಾಕವಿಯ 'ಕಿರಾತಾರ್ಜುನೀಯಂ' ಮಹಾಕಾವ್ಯದ ಕನ್ನಡಾನುವಾದ. ’ಕಿರಾತಾರ್ಜುನೀಯಂ’ ಸಂಸ್ಕೃತದ ಪಂಚಮಹಾಕಾವ್ಯಗಳಲ್ಲಿ ಒಂದು. ಸಂಸ್ಕೃತ ಸಾಹಿತ್ಯ ಪ್ರಪಂಚದಲ್ಲಿ ಮಹಾಕಾವ್ಯಗಳು ಎಷ್ಟಿವೆ ಎಂಬುದು ಎಣಿಕೆಗೆ ಸಿಗಲಾರದು. ಆದರೆ ಯಾವುದೇ ಎಣಿಕೆಯಲ್ಲೂ ಭಾರವಿಯ ಕಿರಾತಾರ್ಜುನೀಯಂ ತಪ್ಪದೇ ಸೇರುತ್ತದೆ. ಅದಕ್ಕೊಂದು ವಿಶೇಷವಾದ ಸ್ಥಾನವೂ ಇದೆ. ಈ ಮಹಾಕಾವ್ಯದ ಸಮಗ್ರ ಚಿತ್ರ ಇದುವರೆಗೆ ಕನ್ನಡಿಗರಿಗೆ ದೊರೆತಿರಲಿಲ್ಲ. ಈ ಕೊರತೆಯನ್ನು ನಮ್ಮ ಸರಸಪ್ರಬಂಧ ಪ್ರಣೇತಾರರಲ್ಲಿ ಒಬ್ಬರೂ, ಪ್ರೌಢಚಿಂತಕರೂ ಆದ ಡಾ. ಪಿ.ಎಸ್. ರಾಮಾನುಜಂ ಅವರು ತೀರಿಸಿದ್ದಾರೆ. ಕಿರಾತಾರ್ಜುನೀಯಂ ಮಹಾಕಾವ್ಯ ಕುರಿತಂತೆ ಅವರ ಈ ಮಹಾಪ್ರಬಂಧ ಕನ್ನಡದಲ್ಲಿ ಅಪೂರ್ವವಾದ, ವಿಶಿಷ್ಟವಾದ ಕೊಡುಗೆಯಾಗಿ ನಿಲ್ಲುತ್ತದೆ ಎಂದಿದ್ದಾರೆ ಸಂಶೋಧಕ ಸಾ.ಕೃ. ರಾಮಚಂದ್ರರಾವ್.
©2024 Book Brahma Private Limited.