ಲೇಖಕ ಹೆಚ್. ರಾಮಚಂದ್ರ ಸ್ವಾಮಿ ಅವರ ಕೃತಿ-ಸಂಕ್ಷಿಪ್ತ ವಾಲ್ಮೀಕಿ ರಾಮಾಯಣ. ಮೂಲ ರಾಮಾಯಣವು ಈಗ ಗುರುತಿಸಲು ಅಸಾಧ್ಯ ಎಂಬಷ್ಟು ರಾಮಾಯಣಗಳು ನಮ್ಮಲ್ಲಿವೆ. ಯಾವ ಮತ್ತು ಯಾರು ಬರೆದ ರಾನಮಾಯಣ ನೈಜವಾದದ್ದು ಎಂದು ಹೇಳುವುದು ಕಷ್ಟ. ಯಾವುದೇ ರಾಮಾಯಣದ ಮೂಲ ಆಶಯಕ್ಕೆ ಧಕ್ಕೆ ತಂದಿಲ್ಲ ಎಂಬುಷ್ಟು ಸ್ಪಷ್ಟ. ಮಕ್ಕಳಿಗಾಗಿ ರಾಮಾಯಣವನ್ನು ಸಂಕ್ಷಿಪ್ತವಾಗಿ ಬರೆಯಲು ಯಾವುದೇ ರಾಮಾಯಣ ಅನುಸರಿಸಿದರೂ ವ್ಯತ್ಯಾಸವಾಗದು. ಈ ಹಿನ್ನೆಲೆಯಲ್ಲಿ,ರಚಿಸಿದ ಕೃತಿ ಇದು. ಇಂತಹ ಕೃತಿಗಳು ಮಕ್ಕಳಲ್ಲಿಹಾಗೂ ದೊಡ್ಡವರಲ್ಲೂ ಬದುಕಿನ ಆದರ್ಶವನ್ನು, ಜೀವನದ ನಿರಂತರತೆಯನ್ನು ಧ್ವನಿಸುತ್ತವೆ. ಹಾಗೂ ಬದುಕನ್ನು ನಿರ್ದೇಶಿಸಿತ್ತವೆ.
©2025 Book Brahma Private Limited.