ಹಿರಿಯ ಲೇಖಕ ದೇರಾಜೆ ಸೀತಾರಾಮಯ್ಯ ಅವರ ಕೃತಿ-ಶ್ರೀರಾಮಚರಿತಾಮೃತಂ (ದೇರಾಜೆ ರಾಮಾಯಣ) ಮೂಲ ರಾಮಾಯಣವನ್ನೇ ಕೇಂದ್ರವಾಗಿಟ್ಟುಕೊಂಡು, ಆದರೆ, ಮೂಲ ಚೌಕಟ್ಟು ಮೀರದೇ, ವಿಭಿನ್ನ ದೃಷ್ಟಿಯಿಂದ ಸರಳವಾಗಿ ರಚಿಸಿದ ಕೃತಿ. ಯಕ್ಷಗಾನ ವಲಯದಲ್ಲಿ ದೇರಾಜೆ ರಾಮಾಯಣ ಎಂದೇ ಪ್ರಸಿದ್ಧಿ. 80 ವರ್ಷಗಳ ಹಿಂದೆ ಈ ಕೃತಿಯು ಮೊದಲು ಪ್ರಕಟವಾಗಿತ್ತು.2015 ನವೆಂಬರ್ 12 ರಂದು ದೇರಾಜೆ ಸೀತಾರಾಮಯ್ಯನವರ ಶತಮಾನೋತ್ಸವ ಆಚರಣೆ ಸಂದರ್ಭ ಈ ಕೃತಿ ಮೂರನೇ ಮುದ್ರಣ ಕಂಡಿದೆ. ಭಾಷೆಯು ಸರಳವಾಗಿದೆ. ಮನೋಹರವಾಗಿದೆ. ಉಪಮೆಗಳು ಹೇರಳವಾಗಿವೆ. ಕಥೆಯ ಓಟ, ವಿಮರ್ಶೆ, ಸಂಭಾಷಣೆಯ ಚತುರತೆ ಇಲ್ಲಿಯ ವೈಶಿಷ್ಟ್ಯ.‘ ಶ್ರೀ ರಾಮಚಂದ್ರನ ದಿವ್ಯ ಚರಿತೆಯ ಘಟನೆಗಳನ್ನು ವಾಲ್ಮೀಕಿಯ ಹಿಂದೆ ನಿಂತುಕೊಂಡು ಕಣ್ಣಾರೆ ನೋಡಿರುವಂತೆ ನನಗೆ ಭಾಸವಾಗುತ್ತದೆ. ವಾಸ್ತವಿಕವಾಗಿ ಮನಸ್ಸನ್ನು ಸೆರೆ ಹಿಡಿಯುವಂತ ನಿರೂಪಣೆಗಳು’ ಎಂದು ಹಿರಿಯ ಸಾಹಿತಿ ಡಿ.ವಿ.ಜಿ. ಪ್ರಶಂಸಿಸಿದ್ದಾರೆ. ಇವರ "ಶ್ರೀರಾಮಚರಿತಂ" ಗ್ರಂಥಕ್ಕೆ ಮೈಸೂರು ಸರ್ಕಾರದಿಂದ ಪಾರಿತೋಷಕ ಲಭಿಸಿದೆ.
©2024 Book Brahma Private Limited.