ಇರಾನಿನ ಮಹಾಕವಿ ಫಿದೋಷಿಯ ‘ಷಹ ನಾಮ’ ಬೃಹತ್ ಕೃತಿಯ ಒಂದು ಭಾಗವನ್ನು ಲೇಖಕ ಭಾರತೀಸುತರು ಕನ್ನಡಕ್ಕೆ ಅನುವಾದಿಸಿದ ಕೃತಿಯೇ -ಇರಾನಿನ ವೀರರು. ವೆಲಿನ್ ಗೆಂಡಿ ಎಂಬುವರು ಈ ಮೊದಲು ಈ ಕೃತಿಯನ್ನು ಇಂಗ್ಲಿಷಿನಲ್ಲಿ ಬರೆದಿದ್ದರು. ಷಹನಾಮ ಎಂಬುದು ಇರಾನ್ ಭಾಷೆಯ ಮಹಾಕಾವ್ಯ. ಸೋಹ್ರಾಬ್ ಹಾಘೂ ರಸ್ತುಂ ಅವರ ಕತೆಯು ಈ ಮಹಾಕಾವ್ಯದ ಪ್ರಮುಖ ಭಾಗವಾಗಿದೆ.
ನಾಡಿನ ಅರಸರ ಚರಿತ್ರೆಗಳನ್ನು ಷಹನಾಮ ದಲ್ಲಿ ವರ್ಣಿಸಲಾಗಿದೆ. ಈ ಮಹಾಕಾವ್ಯವನ್ನು ಬರೆಯಲು ಹಚ್ಚಿದ್ದೇ ಚಕ್ರವರ್ತಿ ಘಜನಿ ಮೊಹಮ್ಮದ್. ಈ ಕಾವ್ಯ ಪೂರ್ಣಗೊಳ್ಳಲು 30 ವರ್ಷ ಹಿಡಿಯಿತು. 60 ಸಹಸ್ರ ಚಿನ್ನದ ನಾಣ್ಯಗಳನ್ನು (ವಾಗ್ದಾನದಂತೆ) ಕಳುಹಿಸುವ ಬದಲು ಬೆಳ್ಳಿಯ ನಾಣ್ಯಗಳನ್ನು ಕಳುಹಿಸಲಾಗಿತ್ತು. ಫಿರ್ಧೋಷಿ ಅದನ್ನು ಬಡಬಗ್ಗರಿಗೆ ನೀಡಿ ರಾಜನನ್ನು ಹಂಗಿಸಿದ. ರಾಜ ತನ್ನ ತಪ್ಪಿನ ಅರಿವಾಗಿ ಅದಕ್ಕೆ ದಂಡ ಎಂಬಂತೆ 1 ಲಕ್ಷ ಚಿನ್ನದ ನಾಣ್ಯಗಳನ್ನು ಕಳುಹಿಸಿದ. ಅದು ಆನೆ-ಒಂಟೆಗಳ ಮೇಲೆ ಬರುತ್ತಿದ್ದಂತೆ ಇತ್ತ ಫಿರ್ದೋಷಿ ತನ್ನ ಇಹ ಯಾತ್ರೆ ಮುಗಿಸಿದ್ದ.ಆತ ಬರೆದ ಷಹ ನಾಮದ ಒಂದು ಭಾಗದ ಕಥೆ ಇದಾಗಿದೆ.
©2024 Book Brahma Private Limited.