‘ಧಮ್ಮಪಥಂ’ ಬುದ್ಧನ ಜೀವನದ ದರ್ಶನ ಕುರಿತಾದ ಮಹಾಕಾವ್ಯವಾಗಿದೆ. ತೆಲುಗು ಮೂಲ ಕೃತಿಯ ಲೇಖಕ ಜಿ.ಆರ್. ಕುರ್ಮೆ. ಕನ್ನಡಕ್ಕೆ ಅನುವಾದಿಸಿದವರು ಗುರುಮೂರ್ತಿ ಪೆಡಂಕೂರು. ಕಾವ್ಯ ಸಂಕಲನ ನಲವತ್ತೊಂದು ಕವಿತೆಗಳನ್ನು ಒಳಗೊಂಡಿದ್ದು ಸಿದ್ಧಾರ್ಥನ ಪೂರ್ವಾಶ್ರಮವನ್ನು, ಸಾಧಿತ ಬದುಕಿನ ಹಲವು ಹಂತಗಳನ್ನು ಹಿಡಿದಿಟ್ಟಿರುವುದು ಕವಿಯ ಕಲ್ಪನಾ ಪ್ರತಿಭೆಗೆ ಸಾಕ್ಷಿ. ಓದುಗರಿಗೆ ಜೀವ ವೈವಿಧ್ಯತೆಯ ನಡುವಿನ ಸಾಮರಸ್ಯದ ಅಗತ್ಯ ಹಾಗೂ ಆಧ್ಯಾತ್ಮಿಕ ಸಿದ್ಧಿಯನ್ನು ನೀಡುತ್ತದೆ. ಹಣ-ಅಧಿಕಾರವೇ ಮುಖ್ಯವಾಗಿ ಎಲ್ಲವೂ ತಕ್ಷಣಕ್ಕೆ ಬದಲಾಗುತ್ತಿರುವ, ಸ್ವಾರ್ಥ ಮತ್ತು ಹಿಂಸೆಯಿಂದ ಮಾನವ ಸಂಬಂಧಗಳು ಪಲ್ಲಟಗೊಳ್ಳುತ್ತಿರುವ ಪ್ರಸ್ತುತ ಸಂದರ್ಭಕ್ಕೆ ಶಾಂತಿಯ ಸಂಕೇತವಾದ ಬುದ್ಧನ ಚಿಂತನೆ ಇಂದಿನ ಅಗತ್ಯವಾಗಿದೆ ಎಂಬುದನ್ನು ಈ ಕೃತಿಯು ತಿಳಿಸುತ್ತದೆ.
(ಹೊಸತು, ಮೇ 2013, ಪುಸ್ತಕದ ಪರಿಚಯ)
ಪ್ರಪಂಚದ ಹಿಂಸೆಗೆ ಪ್ರತಿಸ್ಪರ್ಧಿಯಾಗಿ ಕಾಣುವುದು ಗೌತಮ ಬುದ್ಧ ಭಾರತದಲ್ಲಿ ಜನಿಸಿ ಇಡೀ ಪ್ರವಂಚಕ್ಕೆ ಶಾಂತಿಯ ಅಧಿದೇವತೆಯೆನಿಸಿಕೊಂಡು ಈ ಮಾನವ ಕುಲಕ್ಕೆ ಶಾಂತಿಯೆಂಬ ಅಮೃತವನ್ನು ಉಣಿಸಿದವನು ಈತ ಬುದ್ದನ ಶಾಂತಿಯ ಸಂದೇಶಗಳು ಶತಮಾನಗಳಷ್ಟು ಹಿಂದಿನವಾದರೂ ಪ್ರಸ್ತುತದಲ್ಲಿನ ಅಮಾನವೀಯ ಯಂತ್ರ ನಾಗರಿಕ ಪ್ರಪಂಚಕ್ಕೆ ಔಷಧಿಯಂತೆ ಕಂಡು ಅನಿವಾರ್ಯವೆನಿಸಿದೆ. ಈ ಹಿನ್ನೆಲೆಯಲ್ಲಿ ಗೌತಮ ಬುದ್ದ ಕಾಲಾತೀತ, ಧರ್ಮಾತೀತ ಹಾಗೂ ಪ್ರದೇಶಾತೀತ ದಾರ್ಶನಿಕ. ಕಥನ ಕಾವ್ಯದಂತಿರುವ ಡಾ|| ಕುರ್ಮೆಯವರ 'ಧಮ್ಮಪಥಂ' ಬುದ್ಧನ ಜೀವನವನ್ನು ದರ್ಶಿಸುವ ಮಹಾಕಾವ್ಯ ಸಿದ್ದಾರ್ಥನು ಬುದ್ಧನಾದ ಕಥೆಯನ್ನು ಕಾವ್ಯ ಶೈಲಿಯಲ್ಲಿ ಹೇಳಿರುವ ಈ ಕಾವ್ಯ ಸಂಕಲನ ಸಿದ್ಧಾರ್ಥನ ಜನನದಿಂದ ಪ್ರಾರಂಭಿಸಿ ಬುದ್ಧನ ಜೀವನದ ಹಲವು ಹಂತಗಳ ಕಾಲಘಟ್ಟಗಳನ್ನು ತುಂಬ ಪ್ರಭಾತಿಯಾಗಿ ಕಾವ್ಯದ ಮೂಲಕ ಮನಮುಟ್ಟುವಂತೆ ನಿರೂಪಿಸಿದೆ. ಕಥನ ಕಲೆಯನ್ನು ಕಾವ್ಯವಾಗಿಸುವುದು ಬೋಧಿಸತ್ವ ಸಿದ್ಧಾರ್ಥನನ್ನು ಕಾವ್ಯಮಯವಾಗಿ ವರ್ಣಿಸುವುದು ಅಷ್ಟು ಸುಲಭದ ಮಾತಲ್ಲ, ಅದಕ್ಕೆ ಕಾವ್ಯದ ಲಯಗಳ ಸ್ಪಷ್ಟ ಅರಿಎರಬೇಕು. ಬುದ್ಧನ ಜೀವನಗಾಥೆಯ ಅರಿವಿರಬೇಕು. ಈ ಎಲ್ಲಾ ಸಾಮರ್ಥ್ಯಗಳು ತೆಲುಗಿನ ಹಿರಿಯ ಕವಿ 'ಡಾ ಕುರ್ಮೆ ಯವರಿಗಿರುವುದು ಈ ಸಂಕಲನದಿಂದ ಸ್ಪಷ್ಟಗೊಳ್ಳುತ್ತಿದೆ. 'ಗುರುಮೂರ್ತಿ'ಯವರ ಅನುವಾದ ಪ್ರಜ್ಞೆಗೂ ಇದು ಅನ್ವಯಿಸುತ್ತದೆ. ಕಾವ್ಯ ಸಂಕಲನ ನಲವತ್ತೊಂದು ಕವಿತೆಗಳನ್ನು ಒಳಗೊಂಡಿದ್ದು ಸಿದ್ಧಾರ್ಥನ ಪೂರ್ವಾಶ್ರಮವನ್ನು, ಸಾಧಿತ ಬದುಕಿನ ಹಲವು ಹಂತಗಳನ್ನು ಹಿಡಿದಿಟ್ಟಿರುವುದು ಕವಿಯ ಕಲ್ಪನಾ ಪ್ರತಿಭೆಗೆ ಸಾಕ್ಷಿ. ಹಾಗೆಯೇ ಓದುಗರಿಗೆ ಜೀವ ವೈವಿಧ್ಯತೆಯ ನಡುವಿನ ಸಾಮರಸ್ಯದ ಅಗತ್ಯ ಹಾಗೂ ಆಧ್ಯಾತ್ಮಿಕ ಸಿದ್ಧಿಯನ್ನು ನೀಡುತ್ತದೆ. ಹಣ-ಅಧಿಕಾರವೇ ಮುಖ್ಯವಾಗಿ ಎಲ್ಲವೂ ತಕ್ಷಣಕ್ಕೆ ಬದಲಾಗುತ್ತಿರುವ, ಸ್ವಾರ್ಥ ಮತ್ತು ಹಿಂಸೆಯಿಂದ ಮಾನವ ಸಂಬಂಧಗಳು ಪಲ್ಲಟಗೊಳ್ಳುತ್ತಿರುವ ಪ್ರಸ್ತುತ ಸಂದರ್ಭಕ್ಕೆ ಶಾಂತಿಯ ಸಂಕೇತವಾದ ಬುದ್ಧನ ಚಿಂತನೆ ಇಂದಿನ ಅಗತ್ಯವಾಗಿದೆ.
©2024 Book Brahma Private Limited.