ಕನ್ನಡದ ಆದಿ ಕವಿ ಪಂಪನಿಂದ ಹಿಡಿದು ಇತ್ತೀಚಿನ ಎಸ್.ಎಲ್. ಭೈರಪ್ಪ ಅವರತನಕ ಮಹಾಭಾರತವನ್ನು ತಮ್ಮದೇ ಆದ ದೃಷ್ಟಿಕೋನದಿಂದ ಅಳೆದು-ತೂಗಿ ಕಥೆ-ಕಾದಂಬರಿ-ಕಾವ್ಯವನ್ನು ಹೆಣೆದಿದ್ದಾರೆ. ಕಥೆ ಒಂದೇ ಆದರೂ ವಿಭಿನ್ನ ದೃಷ್ಟಿಕೋನದಿಂದ ಪ್ರತಿ ಕೃತಿಯು ಕಂಗೋಳಿಸುತ್ತವೆ. ಸಾಹಿತ್ಯಕ ಮೌಲ್ಯವೂ ಒಳಗೊಂಡಿವೆ. ವಿಮರ್ಶಕ ಜಿ.ಆಎಸ್. ಆಮೂರ ಅವರು ಮಹಾಭಾರತ ಕಥೆಯನ್ನೇ ಮೂಲವಾಗಿಟ್ಟುಕೊಂಡು ಅದರ ಎಲ್ಲ ಆಯಾಮಗಳನ್ನು ದರ್ಶನ ಮಾಡಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಕಾವ್ಯದಲ್ಲಿಯ ಕೆಲವು ಮಹತ್ವದ ಸಂಸ್ಕೃತ ಶ್ಲೋಕಗಳನ್ನು ಸಂಗ್ರಹಿಸಿ, ಅಧ್ಯಯನ ಮಾಡಿ, ವಿಶೇಷ ಅರ್ಥ ಕಲ್ಪಿಸಿ ತಮ್ಮದೇ ಆದ ವ್ಯಾಖ್ಯಾನ-ವಿಶ್ಲೇಷಣೆಗೆ ಒಳಪಡಿಸಿದ್ದು, ಈ ಕೃತಿಯ ಹೆಗ್ಗಳಿಕೆ. ಈ ಕೃತಿಗೆ ಮುನ್ನುಡಿ ಬರೆದ ಸಾಹಿತಿ -ಚಿಂತಕ. ಎಸ್. ರಾಮಸ್ವಾಮಿ ‘. ಅಮೂರರ ದೃಷ್ಟಿಯಲ್ಲಿ ಮಹಾಭಾರತ ‘ಶ್ರೇಷ್ಠ ಲೌಕಿಕ ಕಾವ್ಯ, ಮಾನುಷ ಲೋಕದ ಕಥೆ’. ಮಾನವನ ಕಠಿಣ ಲೋಕಯಾತ್ರೆ ಯಶಸ್ವಿಯಾಗಬೇಕಾದರೆ ಪಾಥೇಯ ಅವಶ್ಯ. ಈ ಯಾತ್ರೆಗೆ ಬೇಕಾದ ಜ್ಞಾನ ಮತ್ತು ಮಾರ್ಗಗಳ ಚರ್ಚೆ ಇಲ್ಲಿದೆ’ ಎಂದು ಕೃತಿಯ ಪಕ್ಷಿನೋಟವನ್ನು ನೀಡಿದ್ದಾರೆ.
©2024 Book Brahma Private Limited.