ಯುಗಸಂಧ್ಯಾ

Author : ಸುಜನಾ (ಎಸ್. ನಾರಾಯಣ ಶೆಟ್ಟಿ)

Pages 402

₹ 225.00




Year of Publication: 2015
Published by: ಡಿ.ವಿ.ಕೆ. ಮೂರ್ತಿ
Address: ಕೃಷ್ಣಮೂರ್ತಿಪುರಂ, ಮೈಸೂರು-4

Synopsys

ಪ್ರಸಿದ್ಧ ಚಿಂತಕ ಸುಜನಾ ಅವರು ಯುದ್ದೋತ್ತರ ಮಹಾಭಾರತದ ಕಾವ್ಯವನ್ನು ಬರೆದಿದ್ದೇ-ಯುಗಸಂಧ್ಯಾ. ಈ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ (2002) ಲಭಿಸಿದೆ. ಬಹುತೇಕರಿಗೆ ಮಹಾಭಾರತ ಕಥೆಯು ಯುದ್ಧನಡೆದವರೆಗೆ ಮಾತ್ರ ತಿಳಿದಿದೆ. ಆದರೆ, ಯುದ್ಧ ನಂತರದ ನಡೆದಿದೆ ಎನ್ನಬಹುದಾದ ಕಥೆಯ ಸನ್ನಿವೇಶಗಳನ್ನು ವಿವರಿಸಿದ್ದು ಈ ಕೃತಿಯ ಹೆಗ್ಗಳಿಕೆ.

About the Author

ಸುಜನಾ (ಎಸ್. ನಾರಾಯಣ ಶೆಟ್ಟಿ)
(13 April 1930 - 16 May 2011)

ಸುಜನಾ ಎಂಬ ಕಾವ್ಯನಾಮದಿಂದ ಬರೆಯುವ ಎಸ್. ನಾರಾಯಣ ಶೆಟ್ಟಿ  ಅವರು ಜನಿಸಿದ್ದು 1930ರಲ್ಲಿ. ಕೃಷ್ಣರಾಜ ನಗರ ತಾಲ್ಲೂಕು ಹೊಳಲು ಗ್ರಾಮದವರು. ಮೈಸೂರು ವಿಶ್ವವಿದ್ಯಾಲಯಲ್ಲಿ ಪ್ರಾಧ್ಯಾಪಕರಾಗಿ  ಕಾರ್ಯನಿರ್ವಹಿಸಿ ನಿವೃತ್ತರಾದರು. ಕಥೆ, ಪ್ರಬಂಧ, ವಿಮರ್ಶೆ, ಸಂಪಾದನೆ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 1989ರಲ್ಲಿ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದೆ.  ಚಿಲಿಪಿಲಿ, ಇಬ್ಬನಿ, ಆರತಿ, ಮಂಗಳಾರತಿ, ಸಹೃದಯಸ್ಪಂದನ, ನಾಣ್ಯಯಾತ್ರೆ ಅವರ ಪ್ರಮುಖ ಕೃತಿಗಳು. ‘ಹೃದಯ ಸಂವಾದ’, ‘ಪರಂಪರೆ’, ‘ಪರಂಪರೆ ಮತ್ತು ಕುವೆಂಪು’ ಅವರ ಪ್ರಮುಖ ವಿಮರ್ಶಾ ಕೃತಿಗಳು.  ಹೃದಯ ಸಂವಾದ, ಪರಂಪರೆ, ಏಜಾಕ್ ಅವರ ಪ್ರಕಟಿತ ಕೃತಿಗಳು. ‘ಯುಗಸಂಧ್ಯಾ' ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ...

READ MORE

Awards & Recognitions

Related Books