ಮಹಾಕಾವ್ಯಗಳಲ್ಲಿ ಮನಸೆಳೆವ ಪ್ರಸಂಗಗಳು-ಇದು ವಿಮರ್ಶನಾತ್ಮಕ ಬರಹಗಳ ಕೃತಿ. ಲೇಖಕಿ ಬಿ.ಜಿ. ಕುಸುಮಾ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಮಾನವ ಅವಭಾವದ ಅನಾವರಣ, ಮಹಾಭಾರತದ ಮದುವೆಗಳು, ಮಹಾಭಾರತದ ನುಡಿಚಿತ್ರಗಳು, ಮಹಾಭಾರತಗಳ ಕರ್ಣ, ಮೊದಲ ರಣಕಹಳೆ ಮೊಳಗಿಸಿದ ಮಹಿಳೆ, ಅಹಲ್ಯಾ ಶಾಪ ವಿಮೋಚನೆ, ಪಾದುಕಾ ಕೀರೀಟಿ, ಲಂಕಾ ದಹನ, ಕುವೆಂಪು ಕುಂಚದಲ್ಲಿ ಶಬರಿ ಅಧ್ಯಾಯಗಳನ್ನು ಒಳಗೊಂಡಿದೆ. ಸಂಗೀತ ಕೇಳುವುದರಲ್ಲಿ ಆಸಕ್ತಿಯಿದ್ದ ನನಗೆ ಗಮಕಕಲಾ ಪ್ರಪಂಚಕ್ಕೆ ಅತ್ಯಂತ ಆಕಸ್ಮಿಕವಾಗಿ ಪ್ರವೇಶ ಲಭಿಸಿತು. ಇದಕ್ಕೆ ಕಾರಣರಾದವರು ದಿವಂಗತ ಇಂದಿರಾ ವೆಂಕಟೇಶ್ ಅವರು, ಅವರ ಮೂಲಕ ಗಮಕಿ ಗಂಗಮ್ಮ ಕೇಶವಮೂರ್ತಿ ಅವರ ಪರಿಚಯವಾಯಿತು. ಅವರಂತೂ ಅತ್ಯಂತ ನಾಟಕೀಯವಾಗಿ ನನ್ನನ್ನು ವ್ಯಾಖ್ಯಾನದ ವೇದಿಕೆಗೆ ಹತ್ತಿಸಿಬಿಟ್ಟರು. ಮುಂದೆ ನಿರಂತರವಾಗಿ ಆ ವೇದಿಕೆಯ ಮೇಲೆ ನನ್ನನ್ನು ಸ್ಥಾಪಿಸಿದವರು ಗಮಕಿ ಶೋಭಾ ಶಶಿಧರ್ ಎಂದು ಲೇಖಕಿ ಕೃತಿಯ ಕುರಿತು ಬರೆದಿದ್ದಾರೆ.
©2024 Book Brahma Private Limited.