ಮೈಸೂರು ವಿಶ್ವವಿದ್ಯಾಲಯದ ಓರಿಯೆಂಟಲ್ ಲೈಬ್ರರಿ ಪಬ್ಲಿಕೇಷನ್ಸ್ ಪ್ರಾಚ್ಯಕೋಶಾಗಾರವು ರಚಿಸಿದ ತಜ್ಞರ ಮಂಡಳಿಯ ಪರಿಶೀಲನೆ ಅನ್ವಯ ಕರ್ನಾಟಕದ ಮಹಾಭಾರತದ ವಿವಿಧ ಪರ್ವಗಳ ಸಂಪುಟಗಳನ್ನು ಪ್ರಕಟಿಸಲಾಯಿತು. ಪ್ರಧಾನ ಸಂಪಾದಕರಾಗಿ ಎಂ.ಎಸ್. ಬಸವಲಿಂಗಯ್ಯ ಹಾಗೂ ಸಂಪಾದಕರಾಗಿ ಎನ್. ಅನಂತ ರಂಗಾಚಾರ್ ಇದ್ದು, ಆ ಪೈಕಿ ಪ್ರಸ್ತುತ ಕೃತಿಯು ಕುಮಾರ ವ್ಯಾಸ ವಿರಚಿತ ಕರ್ನಾಟಕ ಮಹಾಭಾರತದ ದ್ರೋಣ ಪರ್ವ, ಸಂಪುಟ-8' ಆಗಿದೆ.
ದ್ರೋಣಾಚಾರ್ಯರ ಸೇನಾಧಿಪತ್ಯಾಭಿಷೇಕ, ಧರ್ಮರಾಯನನ್ನು ಹಿಡಿದು ತರುತ್ತೇನೆಂದು ದ್ರೋರ್ಣಾಚಾರ್ಯರ ಪ್ರತಿಜ್ಞೆ, ಪದ್ಮವ್ಯೂಹ ರಚನೆ ಮತ್ತು ಅಭಿಮನ್ಯುವಿನ ಪ್ರವೇಶ, ಆಭಿಮನ್ಯುವಿನ ಮರಣ, ಧರ್ಮರಾಯನ ಪ್ರಲಾಪ, ದ್ರೋಣಾಚಾರ್ಯರ ಯುದ್ಧ ಸನ್ನಾಹ, ಸಾತ್ಯಕಿ ಚಕ್ರವ್ಯೂಹವನ್ನು ಪ್ರವೇಶಿಸಿ ಅರ್ಜುನನ್ನು ಕಾಣುವುದು, ಸೈಂಧವನ ವಧೆ, ಘಟೋತ್ಕಚನ ಕಾಳಗ, ದ್ರೋಣಾಚಾರ್ಯರ ಮರಣ, ಅಶ್ವತ್ಥಾಮನ ಪ್ರಯೋಗಿಸಿದ ನಾರಾಯಾಣಾಸ್ತ್ರದಿಂದ ಶ್ರೀ ಕೃಷ್ಣನು ಪಾಂಡವರನ್ನು ಕಾಪಾಡುವುದು ಹೀಗೆ ವಿವಿಧ ಅಧ್ಯಾಯಗಳು ದ್ರೋಣ ಪರ್ವದ ಸಂಪೂರ್ಣ ವಿವರ ನೀಡುತ್ತವೆ.
©2024 Book Brahma Private Limited.