ಹಿರಿಯ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರು ಗದುಗಿನ ಭಾರತದ ಸರಳ ಗದ್ಯ ಕಥನವನ್ನು ರಚಿಸಿದ ಕೃತಿ-ವಚನ ಕುಮಾರವ್ಯಾಸ. ಮಹಾಭಾರತದ ಪ್ರಮುಖ ಭಾಗವಾದ ಭಗವದ್ಗೀತೆಯು ಬದುಕಿನ ಸ್ವರೂಪ-ಸ್ವಭಾವದ ಸಂಪೂರ್ಣ ಚಿತ್ರಣ ನೀಡುತ್ತದೆ. ಈ ಬದುಕನ್ನು ಹೇಗೆ ಸ್ವೀಕರಿಸಬೇಕು. ಹೇಗೆ ಅನುಭವಿಸಬೇಕು, ಬದುಕಿನ ಉದ್ದೇಶವಾದರೂ ಏನು, ಅತ್ಯಂತ ಪ್ರಭಾವಶಾಲಿ ಸಾವಿಗಿಂತ ಬದುಕು ಹೇಗೆ ಭಿನ್ನ, ಬದುಕುವುದೂ ಒಂದು ಕಲೆ ಇಂತಹ ಅಂಶಗಳನ್ನು ಸ್ಪಷ್ಟಪಡಿಸುವ ಮೂಲಕ ಬದುಕಿಗೆ ಅರ್ಥ ತಂದುಕೊಳ್ಳುವ ಪ್ರಕ್ರಿಯೆಯನ್ನು ತಿಳಿಸುತ್ತದೆ. ಅಷ್ಟು ಮಾತ್ರವಲ್ಲ; ಈ ಗ್ರಹಿಕೆ, ಅರಿವು ಅರಿತಷ್ಟು ಆಳವಾಗಿದೆ; ನೋಡಿದಷ್ಟು ಎತ್ತರವಾಗಿ ಕಾಣಿಸುತ್ತದೆ. ನೋವು, ಹತಾಶೆ, ನಿರಾಸೆಯೊಂದಿಗೆ ಬದುಕಿನ ಪ್ರೀತಿಯ ಅಗತ್ಯವನ್ನೂ ತಿಳಿಸುತ್ತದೆ. ಇಂತಹ ಅರ್ಥಗಳನ್ನು ಒಳಗೊಂಡ ಗದುಗಿನ ಕುಮಾರವ್ಯಾಸ ಭಾರತವನ್ನು ಸರಳವಾಗಿ ನೀಡಿದ ಹೆಚ್ಚುಗಾರಿಕೆ ಈ ಕೃತಿಯದ್ದು.
©2024 Book Brahma Private Limited.