ಮೈಸೂರು ವಿಶ್ವವಿದ್ಯಾಲಯದ ಓರಿಯೆಂಟಲ್ ಲೈಬ್ರರಿ ಪಬ್ಲಿಕೇಷನ್ಸ್ ಪ್ರಾಚ್ಯಕೋಶಾಗಾರವು ರಚಿಸಿದ ತಜ್ಞರ ಮಂಡಳಿಯ ಪರಿಶೀಲನೆ ಅನ್ವಯ ಕರ್ನಾಟಕದ ಮಹಾಭಾರತದ ವಿವಿಧ ಪರ್ವಗಳ ಸಂಪುಟಗಳನ್ನು ಪ್ರಕಟಿಸಲಾಯಿತು. ಪ್ರಧಾನ ಸಂಪಾದಕರಾಗಿ ಎಂ.ಎಸ್. ಬಸವಲಿಂಗಯ್ಯ ಹಾಗೂ ಸಂಪಾದಕರಾಗಿ ಎನ್. ಅನಂತ ರಂಗಾಚಾರ್ ಇದ್ದು, ಆ ಪೈಕಿ ಪ್ರಸ್ತುತ ಕೃತಿಯು ಕುಮಾರ ವ್ಯಾಸ ವಿರಚಿತ ಕರ್ನಾಟಕ ಮಹಾಭಾರತದ ಭೀಷ್ಮ ಪರ್ವ, ಸಂಪುಟ-7' ಆಗಿದೆ.
ಭೀಷ್ಮನು ಕೌರವ ಸೇನಾಧಿಪತ್ಯವನ್ನು ವಹಿಸುವುದು, ಧರ್ಮರಾಯನು ಶತ್ರುಪಕ್ಷದ ವೀರರನ್ನು ಸೆಳೆಯುವ ಪ್ರಯತ್ನ, ಬಂಧುಗಳ ಕೊಲೆಗೆ ಇಷ್ಟಪಡದ ಅರ್ಜುನ, ಕೃರ್ಷನನ ಗೀತೋಪದೇಶ, ಭೀಷ್ಮನ ಮೇಲೆ ಶ್ರೀಕೃಷ್ಣನ ಸುದರ್ಶನ ಚಕ್ರ ಪ್ರಯೋಗ, ಅದನ್ನು ಭೀಷ್ಮನು ನಿವಾರಿಸುವ ಬಗೆ, ಧರ್ಮರಾಯ-ಭೀಷ್ಮನ ಸಂವಾದ, ಅರ್ಜುನನ ಯುದ್ಧ, ಕೌರವ ಸೈನ್ಯ ನಾಶ, ಭೀಷ್ಮಾರ್ಜುನರ ಸಮಯುದ್ಧ, ಶಿಖಂಡಿಯ ಎದುರಿನಲ್ಲಿ ಭೀಷ್ಮನ ಶಸ್ತ್ರ ತ್ಯಾಗ ಹಾಗೂ ಶರಶಯ್ಯೆಯಲ್ಲಿ ಭೀಷ್ಮನ ಮರಣ ಹೀಗೆ ವಿವಿಧ ಅಧ್ಯಾಯಗಳಡಿ ಭೀಷ್ಮ ಪರ್ವದ ಸಂಪೂರ್ಣ ವಿವರ ನೀಡಲಾಗಿದೆ.
©2024 Book Brahma Private Limited.