ಸೀತಾ ಪರಿತ್ಯಾಗ ಪ್ರಸಂಗ

Author : ಸಿ.ಪಿ. ನಾಗರಾಜ

Pages 106

₹ 130.00




Year of Publication: 2024
Published by: ನಾಗು ಸ್ಮಾರಕ ಪ್ರಕಾಶನ
Address: ಆರ್.ವಿ.ಕಾಲೇಜು ಪೋಸ್ಟ್, ಬೆಂಗಳೂರು.
Phone: 9986347521

Synopsys

‘ಸೀತಾ ಪರಿತ್ಯಾಗ ಪ್ರಸಂಗ’ (ಲಕ್ಷೀಶ ಕವಿಯ ಜೈಮಿನಿ ಭಾರತ ಓದು) ಸಿ.ಪಿ ನಾಗರಾಜ ಅವರ ಕೃತಿಯಾಗಿದೆ. ಇದಕ್ಕೆ ಎಸ್.ವಿ.ಪ್ರಭಾವತಿ ಅವರ ಬೆನ್ನುಡಿ ಬರಹವಿದೆ; ಮಹಾಭಾರತದೊಳಗೊಂದು ರಾಮಾಯನ ಹೌದು. ರಾಮಾಯಣವು ಮಹಾಭಾರತಕ್ಕಿಂತ ಪ್ರಾಚೀನ. ಮಹಾಭಾರತದ ಅನೇಕ ಉಪಾಖ್ಯಾನಗಳಲ್ಲಿ ರಾಮಾಯಣವೂ ಒಂದು. ಆದರೆ ಲಕ್ಷ್ಮೀಶನ ಭಾರತದ ಒಳಗೆ ರಾಮಾಯಣದ ಸೀತಾ ಪರಿತ್ಯಾಗದ ಸೊಗಸೇ ಬೇರೆ. ಇಡೀ ಕಾವ್ಯದಲ್ಲಿ ಇದು ಶ್ರೇಷ್ಟಮಟ್ಟದ ಕಾವ್ಯ ಭಾಗ ಎಂದು ದಾಖಲಾಗಿದೆ. ಕುರುಕ್ಷೇತ್ರ ಯುದ್ಧ ಮುಗಿದ ನಂತರ ಬಂಧು ಬಾಂಧವರ ಹತ್ಯೆಯಿಂದ ನೊಂದ ಧರ್‍ಮರಾಯನು ಆ ಪಾಪವನ್ನು ಕಳೆದುಕೊಳ್ಳು ಅಶ್ವಮೇಧಯಾಗವನ್ನು ಮಾಡುವಂತೆ ಋತ್ಪಿಜರು ಸೂಚಿಸುತ್ತಾರೆ. ಯುಗದ ಕುದುರೆಯ ಜೊತೆಯಲ್ಲಿ ಹೊರಟ ಅರ್ಜುನನನ್ನು ಬಬ್ರುವಾಹನ ತಡೆದಾಗ, ಹಿಂದೆ ಕೂಡ ಈ ರೀತಿಯಲ್ಲಿ ತಂದೆ ಮಕ್ಕಳಿಗೆ ಯುದ್ಧವಾಗಿತ್ತು ಎಂದು ಬಿಡುತ್ತಾರೆ. ಕತೆ ಹೇಳುತ್ತಿದ್ದ ವೈಶಂಪಾಯನರು ಅಗಜನಮೇಜಯನು ‘ಅದೇನು ಕತೆ’ ಎಂದು ಒತ್ತಾಯಿಸಿದಾಗ ಬರುವಂಥದು ರಾಮಾಯಣದ ಸೀತಾ ಪರಿತ್ಯಾಗ ಮತ್ತು ಲವಕುಶರು ರಾಮನೊಂದಿಗೆ ಹೋರಾಡಿದ ಕತೆ ಇದಾಗಿದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ಸಿ.ಪಿ. ನಾಗರಾಜ

ಬರಹಗಾರ ಸಿ.ಪಿ ನಾಗರಾಜು ಅವರು 1945ರಲ್ಲಿ ಪುಟ್ಟೇಗೌಡ-ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಜನಿಸಿದರು. ಎಂ.ಎ, ಪಿಎಚ್.ಡಿ ವ್ಯಾಸಂಗ ಮಾಡಿ ಸ್ತುತ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುದ್ರಿತ ನಾಟಕ ಕೃತಿಗಳು: ಭಾಗೀರಥಿ, ಅಂಬೆ, ಹಾವು, ಅಂಗಿಬಟ್ಟೆ, ಒಂದು ರೂಪಾಯಿ, ಕಳ್ಳರಿದ್ದಾರೆ ಎಚ್ಚರಿಕೆ, ಹೆಣದ ಹಣ, ಮೂರು ಸಾಮಾಜಿಕ ನಾಟಕಗಳು. ಮುದ್ರಿತ ಗದ್ಯ ಕೃತಿಗಳು: ಕರಿಯನ ಪುರಾಣ, ಕನಕನ ಅವ್ವ, ಹಳ್ಳಿಗಾಡಿನ ರೂವಾರಿ, ಡಾ.ಬಂದೀಗೌಡ, ಆಣೆ ಪ್ರಮಾಣಗಳು, ಬಯ್ಗುಳ, ಸರ್ವಜ್ಞ ವಚನಗಳ ಓದು, ಅಲ್ಲಮ ವಚನಗಳ ಓದು, ಶಿವಶರಣೆಯರ ವಚನಗಳ ಓದು, ಶಿವಶರಣರ ವಚನಗಳ ಓದು, ಬಸವಣ್ಣನ ...

READ MORE

Related Books