ಪಿ.ಎನ್. ರಂಗನ್ ಅವರು ‘ಮನು’ ಕಾವ್ಯನಾಮದಿಂದ ಬರೆದ ಕೃತಿ- ಮಹಾ ಸಂಪರ್ಕ. ಮಹಾ ವಿದ್ವಾನ್ ಪ್ರೊ.ಎಸ್.ಕೆ. ರಾಮಚಂದ್ರರಾವ್ ಅವರು ಮುನ್ನುಡಿ ಬರೆದಿದ್ದಾರೆ. ಮೊದಲನೆ ಸಂಪುಟ ‘ತರ್ಕ’ದಲ್ಲಿ ಹಾಗೂ ಎರಡನೆ ಸಂಪುಟ ‘ಸಾಧ್ಯ’ದಲ್ಲಿ, ತಾರ್ಕಿಕವಾಗಿ, ವೈಜ್ಞಾನಿಕವಾಗಿ, ಋಗ್ವೇದ ಹಾಗೂ ಮಹಾಭಾರತಗಳ(ಸಾಹಿತ್ಯಕ) ಆಧಾರದ ಮೇಲೆ, ‘ದೇವಭೂಮಿ’ಯ ಉಪಸ್ಥಿತಿಯ (ಭೌಗೋಳಿಕ) ಆಧಾರದ ಮೇಲೆ, ಹಾಗೂ ಅನೇಕ ಸಾಂಸ್ಕೃತಿಕ, ಜಾನಪದ ಕಥಾನಕಗಳ ಆಧಾರದ ಮೇಲೆ ಬೇರೊಂದು ತಾರಾಲೋಕದಿಂದ ಬಂದಿಳಿದ-ಇಲ್ಲಿಯ ಜನರ ಜೊತೆ ಸಂಪರ್ಕ ನಡೆಸಿದ ಪ್ರಾಜ್ಞರ ಮಾತನ್ನು ಬಹಳ ಪ್ರಭಾವಶಾಲಿಯಾಗಿ ಮುಂದಿಡುತ್ತಾರೆ. ಇಲ್ಲಿಯ ಬರೆಹ ಶೈಲಿಯು ತುಂಬಾ ಪರಿಣಾಮಕಾರಿಯಾಗಿದೆ. ಜೊತೆಗೆ ವಿದ್ವತ್ ಪೂರ್ಣವೂ ಆಗಿದೆ. ಮಹಾಭಾರತವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿ ವಿಶ್ಲೇಷಿಸಿದ ಕೃತಿ ಇದು.
©2024 Book Brahma Private Limited.